Site icon PowerTV

ನಾನು ಕಟುಕ ಹೃದಯ ಹೊಂದಿಲ್ಲ : ಹೆಚ್.ಡಿ.ಕುಮಾರಸ್ವಾಮಿ

ಮಂಡ್ಯ : ನಾನು ಇನ್ಮುಂದೆ ಕಣ್ಣಲ್ಲಿ ನೀರು ಹಾಕೋದೇ ಬೇಡ ಎಂದು ನಿರ್ಧರಿಸಿದ್ದೀನಿ’ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಹೇಳಿಕೆ ನೀಡಿದ್ದಾರೆ.

ನಾನು ಕಟುಕ ಹೃದಯವನ್ನು ಹೊಂದಿಲ್ಲ ನನಗೂ ಜನರ ಕಷ್ಟ, ಅನುಕಂಪ, ಭಾವನಾತ್ಮಕ ವಿಚಾರ ನೋಡಿದಾಗ ಹೃದಯವು ಮಿಡಿಯುತ್ತದೆ.ನಾನು ಸಿಎಂ ಆಗಿದ್ದಾಗ ಕನಗನ ಮರಡಿ ಬಸ್ ದುರಂತ ನಡೆಯಿತು. ಆಗ ಅದನ್ನ ನೋಡಿ ನಾನು ಕಣ್ಣಲ್ಲಿ ನೀರು ಹಾಕಿದ್ದೀನಿ.ಕೆಲವರು ಟವಲ್​ನಲ್ಲಿ ಗ್ಲಿಜರಿನ್ ಹಾಕೊಂಡು ಅಳ್ತಾರೆ ಅಂತಾರೆ ಆದರೆ ಅವರೀಗೆ ಏನು ಗೊತ್ತು ಭಾವನಾತ್ಮಕ ವಿಚಾರಗಳು ಬಂದಾಗ ನನ್ನ ಕಣ್ಣಲ್ಲಿ ನೀರು ತರಿಸುತ್ತವೆ ಎಂದರು.

ಜೆಡಿಎಸ್ ಪಕ್ಷವನ್ನ ಕುಟುಂಬ ಪಕ್ಷ ಎಂದು ಸಿದ್ದರಾಮಯ್ಯ ಆರೋಪ ಮಾಡುತ್ತಾರೆ. ಆದರೆ ಡಾಕ್ಟರ್ ಆಗಿದ್ದ ತಮ್ಮ ಮಗನನ್ನ ಯಾಕೆ ರಾಜಕೀಯಕ್ಕೆ ಕರೆತಂದರು ಅವರು ಇದನ್ನ ಏನಂತ ಕರಿಬೇಕು, ಎಫ್ ಅನ್ನ ಬೇಕಾ ಸಿ ಅನ್ನಬೇಕಾ?ಈಗಿನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ 8 ಅಭ್ಯರ್ಥಿಗಳನ್ನ ಕುಟುಂಬದಲ್ಲೇ ನಿಲ್ಲಿಸಿದ್ದಾರೆ. ಅಲ್ಲದೆ ಸಂವಿಧಾನದಲ್ಲಿ ಒಂದು ಕುಟುಂಬದಲ್ಲಿ ಎಷ್ಟು ಜನ ಚುನಾವಣೆಗೆ ಸ್ಪರ್ಧಿಸಬೇಕೆಂಬ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಹಾಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡೋದನ್ನ ಬಿಡಬೇಕೆಂದು ಹೇಳಿಕೆ ನೀಡಿದ್ದಾರೆ.

Exit mobile version