Site icon PowerTV

ಏಷಿಯನ್ ಚಾಂಪಿಯನ್ ಟ್ರೋಫಿಯಲ್ಲಿ ಭಾರತದ ಶುಭಾರಂಭ

ಡೊಂಘೆ:   ಭಾರತದ ಮಹಿಳಾ ಹಾಕಿ ತಂಡ ಏಷಿಯನ್ ಚಾಂಪಿಯನ್ ಟ್ರೋಫಿಯಲ್ಲಿ ತಾನಾಡಿದ ಪ್ರಥಮ ಪಂದ್ಯದಲ್ಲಿ ಭಾರಿ ಗೋಲುಗಳ ಅಂತರದಿಂದ ಗೆದ್ದಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು ಥೈಲೆಂಡ್ ತಂಡವನ್ನು 13-0 ಗೋಲುಗಳ ಅಂತರದಿಂದ ಸೋಲಿಸಿ ಚಾಂಪಿಯನ್ ಟ್ರೋಫಿಯ ಶುಭಾರಂಭ ಮಾಡಿದರು.

ಭಾರತದ ವನಿತೆಯರ ಪರವಾಗಿ ಡ್ರಾಗ್ ಫ್ಲಿಕರ್ ಗುರ್ಜಿತ್ ಕೌರ್ 5ಗೋಲುಗಳನ್ನು ಒಬ್ಬರೇ ಬಾರಿಸಿದರು. ಆಟ ಶುರುವಾದ ಎರಡೇ ನಿಮಿಷಗಳಲ್ಲಿ ಥೈಲೆಂಡ್ ಮಾಡಿದ ತಪ್ಪಿಗೆ ಪೆನಾಲ್ಟಿ ದೊರೆತು ಗುರ್ಜಿತ್ ಕೌರ್ ಗೋಲು ಮಾಡುವ ಮೂಲಕ ಭಾರತದ ಗೋಲು ಖಾತೆಯನ್ನು ತೆರೆದರು.   ಈ ಹಿಂದೆ ಟೋಕಿಯೊ ಒಲಂಪಿಕ್ಸ್​ನಲ್ಲಿ 4 ಗೋಲುಗಳನ್ನು ಬಾರಿಸಿದರು ಗುರ್ಜಿತ್ ಕೌರ್ ಅತ್ಯಂತ ಸಮಾಧಾನಚಿತ್ತವಾಗಿ ಆಡಿ ಗೋಲು ಗಳಿಸುವುದರಲ್ಲಿ ಸಿದ್ಧಹಸ್ತರು.

Exit mobile version