Site icon PowerTV

ನಿಮ್ಮಿಂದ ನಾನು ದೂರ ಹೋಗಲ್ಲಾ : ಹೆಚ್.ಡಿ. ದೇವೇಗೌಡ

ತುಮಕೂರು : ಎಂಎಲ್ಸಿ ಚುನಾವಣೆಯಲ್ಲಿ ಬೇರೆ ಪಕ್ಷಕ್ಕೆ ಜೆಡಿಎಸ್ ಬೆಂಬಲ ವಿಚಾರವಾಗಿ ಬಳಗೆರೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಆಯಾ ಕ್ಷೇತ್ರದಲ್ಲಿ ಸ್ಥಳೀಯ ನಾಯಕರಿಗೆ ಮೊದಲ ಶತ್ರುಗಳು ಯಾರು ಅಂತಾ ಅವರೇ ತೀರ್ಮಾನ ಮಾಡ್ತಾರೆ. ಹಾಗೂ ಅವರ ಬೆಂಬಲ ನಿರ್ಧಾರ ಅವರಿಗೆ ಬಿಟ್ಟಿದ್ದು.ಈ ಚುನಾವಣೆ ಅಷ್ಟೆ ಅಲ್ಲಾ ಬರುವ ಮುಂದಿನ ದಿನಗಳ ಚುನಾವಣೆಯಲ್ಲಿ ಕೂಡ.

ಅಲ್ಲದೇ 2023 ಚುನಾವಣೆಯಲ್ಲಿ ಇದೇ ದೇವೇಗೌಡ ತುಮಕೂರಿನಲ್ಲಿ ನಿಮ್ಮ ಮುಂದೆ ಇರ್ತಾನೆ. 2024 ಲೋಕಸಭೆ ಚುನಾವಣೆಯಲ್ಲೂ ದೇವೇಗೌಡ ತುಮಕೂರಿನಲ್ಲಿ‌ ಇರುತ್ತಾನೆ. ನಾನು ಎಂದಿಗೂ ನಿಮ್ಮಿಂದ ನಾನು ದೂರ ಹೋಗಲ್ಲಾ ಎಂದು ಹೇಳಿದರು.

ಹಾಗು 2024ಕ್ಕೆ ಯಾರು ಕ್ಯಾಂಡಿಟೇಟ್ ಆಗ್ತಾರೆ ಅಂತಾ ತುಮಕೂರಿನ ಮಹಾಜನತೆ ತೀರ್ಮಾನ ಮಾಡ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ತಮ್ಮ ಹೇಳಿಕೆಯನ್ನು ಮಾಧ್ಯಮಕ್ಕೆ ನೀಡಿದರು.

Exit mobile version