Site icon PowerTV

ವಿಶ್ವನಾಥ್‌ ಹತ್ಯೆ ಸ್ಕೆಚ್‌ ಗಂಭೀರ : ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು : ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹತ್ಯೆಗೆ ಸ್ಕೆಚ್‌ ಹಾಕಿದ್ದಾರೆ ಎನ್ನಲಾದ ,5 ತಿಂಗಳ ಹಿಂದಿನ ವಿಡಿಯೋ ಇದೀಗ ಬಯಲಾಗಿದೆ.ರಾಜಕೀಯ ದ್ವೇಷದಿಂದ ಎಸ್‌.ಆರ್‌.ವಿಶ್ವನಾಥ್‌ ಹತ್ಯೆಗೆ ಸ್ಕೆಚ್‌ ಹಾಕಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಮಾದನಾಯಕನಹಳ್ಳಿರುವ ಗೋಪಾಲಕೃಷ್ಣ ಮನೆಯಲ್ಲಿ, ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್‌ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಹಾಗಾದ್ರೆ ಗೋಪಾಲಕೃಷ್ಣ, ಕುಳ್ಳದೇವರಾಜ್‌ ಏನೆಲ್ಲಾ ಮಾತನಾಡಿದ್ದಾರೆ..?

ಆಂಧ್ರದಿಂದ ಶಾರ್ಪ್‌ ಶೂಟರ್‌ಗಳನ್ನ ಕರೆಸಿ ಹೊಡೆಸೋಣ.ಬೆಳಗ್ಗೆ ತೋಟಕ್ಕೆ ವಿಶ್ವನಾಥ್‌ ಒಬ್ಬನೇ ಹೋಗುತ್ತಿರುತ್ತಾನೆ,ಆಗ ಹೊಡೀಬಹುದು, ಸ್ಕೆಚ್‌ ಹಾಕಿದ್ರೆ ಮಿಸ್‌ ಆಗಬಾರದು,ಒಂದು ವೇಳೆ ಹೊಡೆದು ಹಾಕಿದರೆ ಸುಲಭವಾಗಿ ಗೆಲ್ಲಬಹುದು. ನಾನು ನೀನು ಇಬ್ಬರೇ ಸೇರಿ ಕೆಲಸ ಮುಗಿಸೋಣ.ಈ ವಿಷಯ ಯಾರಿಗೂ ಗೊತ್ತಾಗಬಾರದು, ಸೀಕ್ರೆಟಾಗಿ ಮಾಡ್ಬೇಕು. ಲ0 ಲಕ್ಷ ಅಲ್ಲ 1 ಕೋಟಿ ಆದರೂ ಸರಿ ಮಾಡಿಸಬೇಕು.ಕೋಟಿ ರೂಪಾಯಿ ಕೊಡು, ಏನಾದ್ರೂ ಸರಿ ಫಿನಿಶ್‌ ಆಗಲೇಬೇಕು.ಅವನನ್ನು ಮುಗಿಸಿದ್ರೆ 100 ಕೋಟಿ ಸಿಗೋದಾದ್ರೆ ಮುಗಿಸಿ ಬಿಡೋಣ,ಒಂದೇ ಕಡೆ ಸಿಗಬೇಕಲ್ವಾ..?ಯಾವ್‌ ಥರ ಐಡಿಯಾ ಮಾಡು..ಇದಕ್ಕಾಗಿ ದುಡ್ಡಿನ ಹೊಳೆ ಚೆಲ್ಲಿ ಬಿಡೋಣ ಎಂದಿರುವ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್ ನಡುವಿನ ಸಂಭಾಷಣೆ ವಿಡೀಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಿದೆ.

ಇನ್ನು ಪ್ರಕರಣ ಸಂಬಂಧ ಪವರ್ ಟಿವಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ವಿಶ್ವನಾಥ್‌ ಹತ್ಯೆಯ ಸ್ಕೆಚ್‌ ಗಂಭೀರವಾದ ಪ್ರಕರಣ.ಈ  ಸಂಬಂಧ ಈಗಾಗಲೇ ವಿಚಾರಣೆ ನಡೆಯುತ್ತಿದೆ.ಘಟನೆ ಬಗ್ಗೆ ವಿಶ್ವನಾಥ್‌ ನನ್ನ ಗಮನಕ್ಕೆ ತಂದಿದ್ದಾರೆ.ಪ್ರಕರಣ ಸಂಬಂಧ ಎಲ್ಲಾ ರೀತಿಯ ತನಿಖೆ ನಡೆಯುತ್ತಿದೆ,ವಿಶ್ವನಾಥ್‌ ಅವರಿಗೆ ಎಲ್ಲಾ ರೀತಿಯಲ್ಲೂ ಭದ್ರತೆ ಕೊಡುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಕೊಟ್ಟಿದ್ದಾರೆ.

Exit mobile version