Site icon PowerTV

ಸಿಎಂ ಮದುವೆ ಪ್ರೀತಿ…!

ಹುಬ್ಬಳ್ಳಿ : ಅಜ್ಜಿಗೆ ಅರಿವೆ ಚಿಂತೆಯಾದ್ರೆ ಮೊಮ್ಮೊಗಳಿಗೆ ಇನ್ನೇನೊ ಚಿಂತೆಯಂತೆ ಎಂಬ ಗಾದೆಯಂತೆ ಕರ್ನಾಟಕ ಕೊರೋನ, ಅತಿವೃಷ್ಟಿ, ಅಕಾಲ ಮಳೆ, ಬೆಳೆಹಾನಿ ಹೀಗೆ ಹತ್ತು ಹಲವು ಸಮಸ್ಯೆಗಳ ಮಧ್ಯೆ ನಲುಗುತ್ತಿದ್ದರೆ ನಮ್ಮ ಸಿಎಂ ಸಾಹೇಬರಿಗೆ ಮಾತ್ರ ಇವೆಲ್ಲಕ್ಕಿಂತ ಮುಖ್ಯ ಮದುವೆ ಮನೆಯ ಊಟ.!

ನಿಮ್ಮ ಮದುವೆ ಸಮಾರಂಭದಲ್ಲಿ ವಿಐಪಿಗಳು ಬೇಕೆ ? ಹಾಗಾದ್ರೆ ಕೂಡಲೇ ಸಂಪರ್ಕಿಸಿ ಕರ್ನಾಟಕ ಸರ್ಕಾರವನ್ನ ಎನ್ನುವ ಪರಿಸ್ಥಿತಿ ಈಗ ಬಂದಿದೆ. ಹೌದು ಸದ್ಯ ಇದೀಗ ಹೊಸ ಟ್ರೆಂಡ್ ಶುರುವಾಗಿದೆ. ಹಿಂದೆ ಯಾವ ಸಿಎಂ ಸಾಹೇಬ್ರ್​ಗಳು ಮಾಡದ ದಾಖಲೆಯನ್ನ ಬೊಮ್ಮಯಿ ಸಾಹೇಬ್ರ್ ಮಾಡ್ತ ಇದ್ದಾರೆ. ಕಾರಣ ಸಿನೆಮಾ ಕಾರ್ಯಕ್ರಮಗಳ ಬಳಿಕ ಈಗ ಮದುವೆ ಕಾರ್ಯಕ್ರಮಗಳ ಸರದಿ ಮುಂದುವರೆದಿದೆ.

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎಲ್ಲ ಸಮಸ್ಯೆಗಳನ್ನು ಮರೆತು ಪ್ರತಿದಿನ ಮದುವೆ ಸಮಾರಂಭ, ಚಲನಚಿತ್ರದ ಟ್ರೈಲರ್ ಬಿಡುಗಡೆ ಹೀಗೆ ಬರೀ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದು ಇದೀಗ ಎಲ್ಲರ ಹುಬ್ಬೇರಿಸಿದೆ.

ಬೆಳಿಗ್ಗೆ ಆರು ಗಂಟೆಗೆ ಇಂಡಿಗೊ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳಿರುವ ಮುಖ್ಯಮಂತ್ರಿಗಳು ಅಲ್ಲಿ ಎರಡು ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾತ್ರಿ ವಾಪಸಾಗಲಿದ್ದಾರೆ. ಮೊನ್ನೆ ತಾನೇ ದಾವಣಗೆರೆಯಲ್ಲಿ ಮೂರು ಮದುವೆ ಊಟ ಮಾಡಿಕೊಂಡು ಬಂದಿರುವ ಸಿಎಂ ಸಾಹೇಬರಿಗೆ ಸಮಸ್ಯೆಗಳಿಗಿಂತ ಮದುವೆಗಳೇ ಹೆಚ್ಚಾದವೆ?ಎನ್ನುವ ಅನುಮಾನ ಕಾಡುತ್ತಿರುವುದಂತು ನಿಜ.

Exit mobile version