Site icon PowerTV

ಧ್ರುವನಾರಾಯಣಗೆ ಎಬಿಸಿಡಿ ಗೊತ್ತಿಲ್ಲ : ಸಚಿವ ಸೋಮಶೇಖರ್

ಚಾಮರಾಜನಗರ : ಕೈ ಅಭ್ಯರ್ಥಿ ಕೆಜೆಎಫ್ ಬಾಬು ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣಗೆ ಎಬಿಸಿಡಿ ಗೊತ್ತಿಲ್ಲ, ನನಗೆ ಗೊತ್ತು ಆತ ಯಾರು, ಆತನ ಹಿನ್ನೆಲೆ ಏನು ಎಂದು ಸಚಿವ ಸೋಮಶೇಖರ್ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಜಿಎಫ್ ಬಾಬು ಉತ್ತಮ ಅಭ್ಯರ್ಥಿ ಎಂಬಂತೆ ಧ್ರುವನಾರಾಯಣ ಮಾತನಾಡಿದ್ದಾರೆ‌‌.‌ಆದರೆ, ಬಾಬು ವಿರುದ್ಧ 60 ಕ್ಕೂ ಹೆಚ್ಚು FIR ದಾಖಲಾಗಿದ್ದು 20 FIR ನನ್ನ ಮೊಬೈಲ್​​ನಲ್ಲೆ ಇದೆ. ಆತ ಏನು ಎಂದು ನನಗೆ ಗೊತ್ತು, ಬೆಂಗಳೂರು ಅಭ್ಯರ್ಥಿಗಳ ಬಗ್ಗೆ, ಕೆಜಿಎಫ್ ಬಾಬು ಬಗ್ಗೆ ಧ್ರುವನಾರಾಯಣಗೆ ಎಬಿಸಿಡಿಯೂ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.

ಇನ್ನು, ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಕುರಿತು ಮಾತನಾಡಿ, ಮೈಸೂರಿನಲ್ಲಿ ದಳದ ಜೊತೆ ಯಾವುದೇ ಹೊಂದಾಣಿಕೆ ಇಲ್ಲಾ, ಬೇರೆ ಜಿಲ್ಲೆಗಳ ಬಗ್ಗೆ ನನಗೆ ಮಾಹಿತಿ ಇಲ್ಲಾ, ಬೆಳಗಾವಿ ಚುನಾವಣೆ ಬಗ್ಗೆಯೂ ಗೊತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಕುರಿತ ಪ್ರಶ್ನೆಗೆ ಉತ್ತರಿಸದೇ ಜಾರಿಕೊಂಡರು.

ಮಂಜೇಗೌಡ ತಮಗೆ ಬಹಿರಂಗ ಪತ್ರ ಬರೆದಿರುವ ಮಾಹಿತಿ ಇದೆ. ಆದರೆ, ಪತ್ರವನ್ನು ನಾನು ನೋಡಿಲ್ಲ, ಪತ್ರ ಓದಿದ ಬಳಿಕ‌ ಅದಕ್ಕೆ ಸಮಂಜಸವಾದ ಉತ್ತರವನ್ನು ಕೊಡುತ್ತೇನೆ ಎಂದು ಮಂಜೇಗೌಡ ಬಹಿರಂಗ ಪತ್ರಕ್ಕೆ ತಿರುಗೇಟು ಕೊಟ್ಟರು.

ರಘು ಕೌಟಿಲ್ಯ ಅವರು ಮೊದಲ ಪ್ರಾಶಸ್ತ್ಯ ಮತದಿಂದಲೇ ಗೆಲ್ಲುವ ಭರವಸೆ ಮೂಡಿದ್ದು ಚಾಮರಾಜನಗರ-ಮೈಸೂರಿನ ಗ್ರಾಮಾಂತರ ಭಾಗದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದು ಬಿಜೆಪಿ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version