Site icon PowerTV

ಕೇರಳ ಗಡಿ ಚೆಕ್​ಪೋಸ್ಟ್​ಗೆ ದಿಢೀರ್ ಭೇಟಿ ನೀಡಿದ ಡಿಸಿ

ಚಾಮರಾಜನಗರ : ಕೇರಳ ರಾಜ್ಯದಲ್ಲಿ ರೂಪಾಂತರ ಕೊರೋನಾ ಹೆಚ್ಚಳ ಹಿನ್ನಲೆ ಇಂದು ಬೆಳ್ಳಂ ಬೆಳಗ್ಗೆ ಕೇರಳ ಗಡಿ ಚೆಕ್​ಪೋಸ್ಟ್​ಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಎರಡು ಗಂಟೆಗೂ ಹೆಚ್ಚು ಕಾಲ ಖುದ್ದು ಪರಿಶೀಲನೆ ನಡೆಸಿದರು.

ಕಳೆದ ಮೂರು ದಿನದಿಂದಲ್ಲೂ ಚೆಕ್​ಪೋಸ್ಟ್​ನಲ್ಲಿ ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಸಲು ಅಧಿಕಾರಿಗಳನ್ನು ಮೂರು ತಂಡಗಳಾಗಿ ನಿಯೋಜಿಸಿದ್ದು, ತೀವ್ರ ಪರಿಶೀಲನೆ ಮಾಡಲಾಗುತ್ತಿದೆ. ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಗೂ 72 ಗಂಟೆಗಳ ಒಳಗಿನ ನೆಗಿಟಿವ್ ರಿಪೋರ್ಟ್ ಇದ್ರೆ ಮಾತ್ರ ಜಿಲ್ಲೆಗೆ ಎಂಟ್ರಿ ಅವಕಾಶ ನೀಡುತ್ತಿರುವ ಅಧಿಕಾರಿಗಳು ತೀವ್ರ ಕಾರ್ಯಚರಣೆ ಮಾಡಿದ್ದಾರೆ.

ಇನ್ನು ಕಳೆದ ಬಾರಿ ಚೆಕ್​ಪೋಸ್ಟ್​ಗಳಲ್ಲಿ ಹಣ ಪಡೆದು ವಾಹನಗಳನ್ನು ಬಿಡುತ್ತಿದ್ದರೂ ಎಂಬ ಆರೋಪ ಸಹ ಕೇಳಿ ಬಂದಿದ್ದ ಹಿನ್ನಲೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರೇ ಚೆಕ್​ಪೋಸ್ಟ್​ಗೆ ಆಗಮಿಸಿ ಸ್ವತಃ ಪರಿಶೀಲನೆ ನಡೆಸಿದ್ದಾರೆ.

Exit mobile version