Site icon PowerTV

ಭ್ರಷ್ಟಾಚಾರ, ಭಯೋತ್ಪಾದನೆ ಕಾಂಗ್ರೆಸ್ ಕೊಡುಗೆ : ನಳೀನ್ ಕುಮಾರ್ ಕಟೀಲ್

ಬಾಗಲಕೋಟೆ : ಬಿಜೆಪಿ ಪಕ್ಷದ ರಾಜ್ಯ ಮಟ್ಟದ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಪಕ್ಷವು ಭಯೋತ್ಪಾದನೆ ನಿರ್ಮೂಲನೆ ಮಾಡಲು ಸಾಧ್ಯವಾಗದ ಇರುವ ಬಗ್ಗೆ, ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ರಾಜೀವಗಾಂಧಿ‌ ಅವರ ಮೇಲೆ ದಾಳಿಯನ್ನು ವ್ಯಂಗ್ಯವಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಈ ದೇಶಕ್ಕೆ ನಾಲ್ಕು ಕೊಡುಗೆ ಕೊಟ್ಟಿದೆ. 60 ವರ್ಷದ ಇತಿಹಾಸದಲ್ಲಿ ಕಾಂಗ್ರೆಸ್ ಕೊಡುಗೆ, ಅಂದರೆ ಮೊದಲನೆಯದು ಭ್ರಷ್ಟಾಚಾರ ಎರಡನೇಯದು ಭಯೋತ್ಪಾದನೆ, ಮೂರನೇಯದು ನಿರುದ್ಯೋಗ ನಾಲ್ಕನೆಯದು ಬಡತನ ಎಂದು ಬಣ್ಣಿಸಿ,ವ್ಯಂಗ್ಯವಾದ ಮಾತುಗಳನ್ನಾಡಿದ್ದಾರೆ. ನಾಲ್ಕನ್ನೂ ಮುಕ್ತ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಂದು ಹೇಳಿದರು.

ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಭಯೋತ್ಪಾದನೆ ಇಲ್ಲ. ಅದೇ ಕಾಂಗ್ರೆಸ್ ಅವಧಿಯಲ್ಲಿ ಭಯೋತ್ಪಾದನೆ ಹೇಗಿತ್ತು ಅಂತ ಸಣ್ಣ ವಿವರಣೆ ಕೊಡ್ತೇನೆಂದು ನೆಹರೂ ಕಾಲದಲ್ಲಿ ಕೇವಲ ಒಂದು ಗುಂಡಿನಿಂದ ಗೋಡ್ಸೆಯನ್ನು ಕೊಂದಿದ್ದರು. ಇಂದಿರಾಗಾಂಧಿ ಕಾಲದಲ್ಲಿ 17 ಗುಂಡಿನಿಂದ ಇಂದಿರಾಗಾಂಧಿಯನ್ನ ಕೊಂದರು. ರಾಜೀವ್ ಗಾಂಧಿ ಕಾಲದಲ್ಲಿ ಬಾಂಬ್ ಸ್ಪೋಟ ಆಯ್ತು. ಹೀಗೆ ಒಂದು ಗುಂಡಿನಿಂದ 17 ಗುಂಡಿಗೆ ಪ್ರಮೋಷನ್ ಮತ್ತು 17 ಗುಂಡಿನಿಂದ ಬಾಂಬ್​ಗೆ ಪ್ರಮೋಷನ್ ಎಂದು ಕಾಂಗ್ರೆಸ್ ಪಕ್ಷದ ಆಡಳಿತದ ವಿರುದ್ದ ಕಿಡಿಕಾರಿದ್ದರು.

ದೇಶದಲ್ಲಿ ಭಯೋತ್ಪಾದನೆ ಮುಕ್ತ ಹಾಗು ನಕ್ಸಲರ ಮುಕ್ತ ಸರ್ಕಾರ ತಂದಿದ್ದರೆ ಅದು ನರೇಂದ್ರ ಮೋದಿ ಸರ್ಕಾರ ಮಾತ್ರ ಎಂದು ಬಿಜೆಪಿ ಆಡಳಿತವನ್ನು ಹೊಗಳಿದ್ದಾರೆ.

 

Exit mobile version