Site icon PowerTV

ಅಂಜನಾದ್ರಿಗೆ ಭೇಟಿ ನೀಡಿದ ರವಿಶಂಕರ್ ಗುರೂಜಿ

ಕೊಪ್ಪಳ :  ಅಂಜನಾದ್ರಿ ಬೆಟ್ಟಕ್ಕೆ ಇಂದು ದಿ ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ ಭೇಟಿ ನೀಡಿ ಆಂಜನೇಯನ‌ ದರ್ಶನ ಪಡೆದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ 575 ಮೆಟ್ಟಿಲುಗಳನ್ನು ಹೊಂದಿದೆ. 575 ಮೆಟ್ಟಿಲು ಹತ್ತಿ ಬೆಟ್ಟದ ಮೇಲೆ ಇರುವ ಆಂಜನೇಯನ ದರ್ಶನವನ್ನು ರವಿಶಂಕರ್ ಗುರೂಜಿ ಪಡೆದರು. ಈ ವೇಳೆ ದೇವಸ್ಥಾನದ ಆರ್ಚಕರು ಆಂಜನೇಯನಿಗೆ ಅದು ಕೊಡ್ತೀನಿ,ಇದು ಕೊಡ್ತೀನಿ‌ ಅನ್ನೋದು ಭಕ್ತಿ ಅಲ್ಲ . ದೇವರಿಗೆ ಶ್ರದ್ದೆ ಭಕ್ತಿಯಿಂದ ಕೇಳಿಕೊಂಡರೆ ಅಷ್ಟೇ ಸಾಕು ಅವನು ಕೊಡುತ್ತಾನೆಂದು ರವಿಶಂಕರ್ ಗುರೂಜಿಗೆ  ಹೇಳಿದರು.

ಅಲ್ಲದೇ ಆಂಜನೇಯನಿಗೆ ಪೂಜೆಯನ್ನು ಸಲ್ಲಿಸಿ ದೇವರ ಧ್ಯಾನವನ್ನು ಮಾಡಿ  ನಂತರ ಕೆಲ ಸಮಯ ಬೆಟ್ಟದ ಸುತ್ತ ಓಡಾಡಿ ಪ್ರಕೃತಿ ಸೌಂದರ್ಯವನ್ನು ಸವಿದರು.

ಅಂಜನಾದ್ರಿ ಬೆಟ್ಟಕ್ಕೆ ಸಾಕಷ್ಟು ಸೆಲಬ್ರೆಟಿಗಳು , ರಾಜಕೀಯದವರು ಬಂದು ಆ ಭಗವಂತನ ಆರ್ಶೀವಾದವನ್ನು ಪಡೆದು ಪುನೀತರಾಗಿದ್ದಾರೆ. ಇದೀಗ ದಿ ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿವು ಬೆಟ್ಟಕ್ಕೆ ಬಂದು ಆಂಜನೇಯ ದರ್ಶನ ಪಡೆದಿದ್ದಾರೆ.

ಶುಕ್ರಾಜ ಕುಮಾರ ಪವರ್ ಟಿವಿ ಕೊಪ್ಪಳ

Exit mobile version