Site icon PowerTV

ಕೆ.ಸಿ.ಕೊಂಡಯ್ಯ ಅವರಿಗೆ ಟಿಕೆಟ್ ನೀಡಿದಕ್ಕೆ ಬೇಸರವಿಲ್ಲ : ಸಂತೋಷ ಲಾಡ್

ಹುಬ್ಬಳ್ಳಿ : ನಾವು ಕೇಳಿದ ಅಭ್ಯರ್ಥಿಗೆ ಪರಿಷತ್ ಟಿಕೆಟ್ ಸಿಕ್ಕಿಲ್ಲ ಎನ್ನುವುದು ಸುಳ್ಳು, ನಾವು ಯಾರ ವಿರೋಧವು ಅಲ್ಲ, ಪರವು ಅಲ್ಲ ಎಂದು ಹೇಳಿದರು.

ನಗರದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆ ಟಿಕೆಟ್ ಪಡೆಯುವಲ್ಲಿ ಯಾವುದೇ ಹಿನ್ನಡೆ ಎಂಬುದು ಇರುವುದಿಲ್ಲ. ನಾವು ಹೇಳಿದವರಿಗೆ ಟಿಕೆಟ್ ಕೊಡಬೇಕು ಎಂದಿಲ್ಲ. ಹೈಕಮಾಂಡ್​ ಯಾರಿಗೆ ಟಿಕೆಟ್ ಕೊಡುತ್ತೋ ಅವರ ಪರವಾಗಿ ನಾವು ಪ್ರಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದರು.

ಕೆ.ಸಿ.ಕೊಂಡಯ್ಯ ಅವರಿಗೆ ಟಿಕೆಟ್ ನೀಡಿದ ವಿಷಯವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಟಿಕೆಟ್ ನೀಡಿದಕ್ಕೆ ನಮಗೆ ಸಂತೋಷವಿದೆ, ಬೇಸರವಿಲ್ಲ. ನಾನು ಧಾರವಾಡ ಜಿಲ್ಲೆಯಲ್ಲಿ ಸಲೀಂ ಅಹ್ಮದ್ ಸೂಚಿಸಿದ ಯಾವುದೇ ಕ್ಷೇತ್ರದಲ್ಲಿ ಹಾಗೂ ಬಳ್ಳಾರಿ ಜಿಲ್ಲೆಯ ಕೆ.ಸಿ.ಕೊಂಡಯ್ಯ ಅವರ ಪರವಾಗಿ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ತಿಳಿಸಿದರು.

Exit mobile version