Site icon PowerTV

ಎಂ ಎಲ್​ ಸಿ ಚುನಾವಣೆ  15 ಸೀಟ್​ ನಿಶ್ಚಿತವಾಗಿ ಗೆಲುವು : ಬಿ.ಎಸ್.ವೈ

ಶಿವಮೊಗ್ಗ : ವಿಧಾನ ಪರಿಷತ್ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ 20 ರಲ್ಲಿ ನಾವು ಸ್ಪರ್ಧಿಸುತ್ತಿದ್ದು, ಇದರಲ್ಲಿ, ಶಿವಮೊಗ್ಗದ ಅರುಣ್ ಸೇರಿದಂತೆ, 15 ರಲ್ಲಿ ಗೆಲುವು ನಿಶ್ಚಿತ ಎಂದು ಮಾಜಿ ಸಿ.ಎಂ. ಬಿ.ಎಸ್.ವೈ. ಹೇಳಿದ್ದಾರೆ.

ಇಂದು ಚುನಾವಣಾ ಪ್ರಚಾರವಾಗಿ ಶಿವಮೊಗ್ಗಕ್ಕೆ ಬಂದ ಸಂಧರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ಅರುಣ್ ಸಹ ನೂರಕ್ಕೆ ನೂರು ಗೆಲ್ಲುತ್ತಾರೆ.ಇದರಿಂದ ವಿಧಾನಪರಿಷತ್​ನಲ್ಲಿ ನಮಗೆ ಬಹುಮತ ಸಿಕ್ಕಂತಾಗುತ್ತದೆ.ಇದರಿಂದ ನಾವು ಇನ್ನೊಬ್ಬರ ಮೇಲೆ ಅವಲಂಬಿತರಾಗುವುದು ತಪ್ಪಿದಂತಾಗುತ್ತದೆ ಎಂದು ಹೇಳಿದರು.

ಇನ್ನು ಪ್ರಧಾನಿಯವರು, ಮಾರ್ಚ್ ವರೆಗೆ ಆಹಾರ ಧಾನ್ಯ ವಿತರಣೆ ಮಾಡುತ್ತೆವೆ ಎಂಬ ತೀರ್ಮಾನ ತೆಗೆದುಕೊಂಡಿರುವುದು ಇದು ಸ್ವಾಗತಾರ್ಹ ವಿಚಾರವಾಗಿದೆ. ಈ ಒಳ್ಳೆಯ ತೀರ್ಮಾನಕ್ಕೆ ನರೇಂದ್ರ ಮೋದಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಕಾಂಗ್ರೆಸ್​ನ ಸ್ನೇಹಿತರು ಕೇವಲ ಟೀಕೆ ಮಾಡಿಕೊಂಡು ಹೊರಟಿದ್ದಾರೆ. ಚುನಾವಣಾ ಫಲಿತಾಂಶ ಬಂದ ಬಳಿಕ, ಅವರಿಗೆ ವಾಸ್ತವ ಸ್ಥಿತಿ ಅರಿವಾಗುತ್ತದೆ.ಅಲ್ಲಿವರೆಗೆ ನಾನೇನು ಮಾತನಾಡುವುದಿಲ್ಲ.ಜನರೇ ಅವರಿಗೆ ತಕ್ಕ ಬುದ್ದಿ ಕಲಿಸುತ್ತಾರೆ .

ಹಾಗು ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದಾಗ ಬೆಲೆ ಏರಿಕೆಯು ಈ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡಿದ್ದೆವೆ. ನನ್ನ ಅವಧಿಯಲ್ಲಾದ ಕೆಲಸ ಮತ್ತು ಬೊಮ್ಮಾಯಿವರ ಒಳ್ಳೆಯ ಕೆಲಸ ಜನರ ಗಮನ ಸೆಳೆದಿದೆ. ಪೆನ್ಷನ್ ಶೇ. 50 ರಷ್ಟು ನಮ್ಮ ಆದಾಯದಲ್ಲಿ ಖರ್ಚು ಮಾಡುತ್ತಿದ್ದೇವೆ. ವೃದ್ಯಾಪ್ಯ ಮತ್ತು ವಿಧವಾ ವೇತನವನ್ನು 200 ರೂ. ಏರಿಕೆ ಮಾಡಲಾಗಿದೆ. ನಾವು ಕಡು ಬಡವರ ಪರವಾಗಿರುವ ಸರ್ಕಾರ ಎಂಬುದು ಜನರಲ್ಲಿ ಮನವರಿಕೆಯಾಗಿದೆ. ಹೀಗಾಗಿ ಈ ಚುನಾವಣೆ ಬಹಳ ದೊಡ್ಡ ಅಂತರದಿಂದ ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಈ ಚುನಾವಣೆಯಲ್ಲಿ ಜೆಡಿಎಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ ಎಸ್​ ವೈ ಜೆಡಿಎಸ್ ಪಕ್ಷದವರು ಎಲ್ಲಿ ಸ್ಪರ್ಧಿಸಿಲ್ಲ ಅಲ್ಲಿ ನಮ್ಮ ಪಕಷದವರಿಗೆ ಬೆಂಬಲ ನೀಡಿ ಎಂದು ಕುಮಾರಸ್ವಾಮಿಯವರಲ್ಲಿ ನಾನು ಮನವಿ ಮಾಡಿಕೊಂಡಿದ್ದೇನೆಂದು ಯಡಿಯೂರಪ್ಪನವರು ಸ್ಪಷ್ಟನೆ ನೀಡಿದ್ದಾರೆ.

Exit mobile version