Site icon PowerTV

ಸಿದ್ದರಾಮಯ್ಯ ನಿಮಗೆ ನಾಚಿಕೆ ಆಗಲ್ವಾ : ಸಚಿವ ಈಶ್ವರಪ್ಪ

ಮೈಸೂರು: ಚುನಾವಣೆಯಲ್ಲಿ ಸೋಲಿಸಿ ಈಗ ಟಿಕೆಟ್ ಕೇಳಲು ಬಂದಿದ್ದೀರಾ ಎಂದು ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ನಿಮಗೆ ಸೋಲಾದರೆ ಅದು ನೋವು, ಅದೇ ಬೇರೆಯವರಿಗೆ ಸೋಲಾದವರೇ ಅದು ಏನು ನಿಮ್ಮ ಪ್ರಕಾರ ಸೋಲಲ್ಲವೇ . ದಲಿತ ನಾಯಕ ಜಿ ಪರಮೇಶ್ವರ್​ರನ್ನು ಚುನಾವಣೆಯಲ್ಲಿ ಸೋಲಿಸಿದವರು ನಿಮ್ಮ ಪಕ್ಷದವರು, ಪರಮೇಶ್ವರ್ ಸಜ್ಜನ ಆಗಿರೋದಕ್ಕೆ ಸೋಲಿಸಿದವರ ಬಗ್ಗೆ ಏನೂ ಹೇಳಲಿಲ್ಲ. ಆದರೀಗ ನಿಮ್ಮನ್ನು ಸೋಲಿಸಿರುವ ಬಗ್ಗೆ ಕಾರ್ಯಕರ್ತರನ್ನು ಪ್ರಶ್ನೆ ಮಾಡಿದ್ದೀರಲ್ಲಾ ನಿಮಗೆ ನಾಚಿಕೆಯಾಗಲ್ವಾ? ದಲಿತ ಸಿ ಎಂ ವಿಚಾರ ಬಂದಾಗಲೂ ನಾನೇ ದಲಿತ ಎನ್ನುವ ಸಿದ್ದರಾಮಯ್ಯಗೆ ನಾಚಿಕೆ ಆಗಲ್ವಾ ಎಂದು ವಾಗ್ದಾಳಿ ಮಾಡಿದ್ದಾರೆ.

ಲಿಂಗಾಯತರು, ದಲಿತರು, ಹಿಂದುಳಿದವರು, ಮುಸ್ಲಿಂರನ್ನು ಒಡೆದಾಳುವ ಕೆಲಸವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ.  ಅಲ್ಲದೆ ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದರಲ್ಲಿ ನಿಪುಣರು ಎಂದು  ವಿಪಕ್ಷ ನಾಯಕ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

Exit mobile version