Site icon PowerTV

ಕಮಲಾ ಹ್ಯಾರಿಸ್​ಗೆ ಅಧಿಕಾರ ಚಲಾಯಿಸಿದ : ಅಮೆರಿಕ ಅಧ್ಯಕ್ಷ ಜೋ ಬೈಡನ್

ಅಮೆರಿಕಾ : ಭಾರತ ಮೂಲದ ಕಮಲಾ ಹ್ಯಾರಿಸ್ಅವರು ಅಮೆರಿಕದ ಅಧ್ಯಕ್ಷೆಯಾಗಿ ಅಧಿಕಾರ ಚಲಾಯಿಸುವ ಮೂಲ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸುಮಾರು 1 ಗಂಟೆ 25 ನಿಮಿಷಗಳ ಕಾಲ ಅಧ್ಯಕ್ಷೀಯ ಅಧಿಕಾರ ಚಲಾಯಿಸುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆಗೆ ಕಮಲಾ ಪಾತ್ರರಾಗಿದ್ದಾರೆ. ಇದು ಅಮೆರಿಕದ ಇತಿಹಾಸದಲ್ಲಿಯೇ ಮೊದಲು.

ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೇ ತಮ್ಮ ಅಧಿಕಾರವನ್ನು ಕಮಲಾರಿಗೆ ಹಸ್ತಾಂತರಿಸಿದ್ದರು. ಜೋ ಬೈಡೆನ್ ತಮ್ಮ 79ನೇ ಹುಟ್ಟುಹಬ್ಬ ಮುನ್ನಾದಿನವಾದ ಶುಕ್ರವಾರದ ಆರಂಭದಲ್ಲಿ ವಾಷಿಂಗ್ಟನ್‌ನ ಹೊರಗಿನ ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರಕ್ಕೆ ತೆರಳಿದ್ದರು. ವಾರ್ಷಿಕ ತಪಾಸಣೆ (Routine Annual Physical) ಕಾರಣ ಬಿಡೆನ್ ಆರೋಗ್ಯ ತಪಾಸಣೆ ನಡೆಸಬೇಕಿತ್ತು.

ಕೊಲೊನೋಸ್ಕೋಪಿ(Colonoscopy) ಪರೀಕ್ಷೆ ಸಮಯದಲ್ಲಿ ಬಿಡೆನ್ ಅವರಿಗೆ ಅರಿವಳಿಕೆ ಔಷಧಿ ನೀಡಲಾಗಿತ್ತು. ಹೀಗಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಸ್ಥಾನದ ಅಧಿಕಾರವನ್ನು ವಹಿಸಿಕೊಂಡಿದ್ದರು. ಬೈಡೆನ್ ಅವರು ಕಮಲಾರಿಗೆ ಅಲ್ಪಾವಧಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿ ಆರೋಗ್ಯ ತಪಾಸಣೆಗೆ ತೆರಳಿದ್ದರು ಎಂದು ವರದಿಯಾಗಿದೆ.ಒಟ್ಟಾರೆ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಅಧ್ಯಕ್ಷೆಯಾಗಿ ಅಧಿಕಾರ ಚಲಾಯಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

Exit mobile version