Site icon PowerTV

ರಾಜ್ಯದಲ್ಲಿ ಕಾಂಗ್ರೆಸ್ ಅವನತಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್

ತುಮಕೂರು : ದೇಶದಲ್ಲಿ ಕಾಂಗ್ರೆಸ್​ನ್ನು ದುರ್ಬಿನ್ ಹಾಕಿ ಹುಡುಕಬೇಕು. ಪಂಜಾಬ್ ನಲ್ಲಿ ಒಬ್ಬ ಸಿದ್ದು, ರಾಜ್ಯದಲ್ಲೊಬ್ಬ ಸಿದ್ದು ಸೇರಿಕೊಂಡು ಕಾಂಗ್ರೆಸನ್ನು ಸರ್ವನಾಶ ಮಾಡುತ್ತಿದ್ದಾರೆ.ಇಬ್ಬರು ಸಿದ್ದುಗಳಿಂದ ಕಾಂಗ್ರೆಸಿಗೆ ಗುದ್ದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕೆ ಮಾಡಿದ್ದಾರೆ.

ತುಮಕೂರಿನಲ್ಲಿ ನಡೆದ ಸಮಾವೇಶನದಲ್ಲಿ (ನ.19 )ರಂದು ಮಾತನಾಡಿದ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಳಜಗಳ ತಾರಕ್ಕೆರಿದೆ. ಅದು ಅವರ ಪಕ್ಷದ ಸಭೆಯಲ್ಲೇ ಗೋಚರಿಸುತ್ತಿದೆ.ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ, ಎಂದು ಭವಿಷ್ಯ ನುಡಿದಿದ್ದಾರೆ.

ಅಲ್ಲದೆ ನರೇಂದ್ರ ಮೋದಿಯವರು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವುದನ್ನು ಸ್ವಾಗತಿಸುತ್ತೇನೆ. ಸಬ್ ಕೇ ಸಾಥ್, ಸಬ್ ಕೇ ವಿಶ್ವಾಸ್, ಸಬ್ ಕೇ ವಿಕಾಸ್ ಎಂದು ಹೇಳುವ ಮೋದಿಯವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಕಾಯ್ದೆಗಳನ್ನು ವಾಪಾಸ್ ಪಡೆದಿದ್ದಾರೆ. ಮುಂದಿನ ಅಧೀವೇಶನದಲ್ಲಿ ಈ ಕಾಯ್ದೆಗಳಿಗೆ ಒಂದು ರೂಪುರೇಷೆ ಕೊಡಬಹುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.

 

Exit mobile version