Site icon PowerTV

ಕೃಷಿ ಕಾಯ್ದೆ ರದ್ಧು, ರೈತರಿಗೆ ಗೆಲುವು

ಬೆಂಗಳೂರು : ಸುಮಾರು 355 ದಿನದ ಅನ್ನದಾತರ ನಿರಂತರ ಹೋರಾಟಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮಣಿದಿದೆ. ಕಳೆದ ವರ್ಷ ಕೇಂದ್ರ ಸರ್ಕಾರ 3 ಕೃಷಿ ಕಾನೂನುಗಳನ್ನು (ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ) ಜಾರಿಗೊಳಿಸಿತ್ತು.

ಈ ಕುರಿತಂತೆ 3 ಕೃಷಿ ಕಾಯ್ದೆ ವಾಪಸ್ ಪಡೆಯಲು ದೇಶಾದ್ಯಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಕಳೆದ 1 ವರ್ಷದಿಂದ ರೈತರು ದೆಹಲಿಯ ಸಿಂಘುಗಡಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು.

ಇನ್ನು ನವೆಂಬರ್ 26, 2020ರಲ್ಲಿ ರೈತರು ಹೋರಾಟವನ್ನ ತೀವ್ರಗೊಳಿಸಿದ್ದರು, ಈ ಕೃಷಿ ಕಾಯ್ದೆ ಹೋರಾಟದಲ್ಲಿ ಸುಮಾರು 600ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದರು. ಇದೀಗ ಕೊನೆಗೂ ರೈತರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದೆ.ಮೂರು ವಿವಾಧಿತ ಕೃಷಿ ಕಾನೂನನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ.

ಅಲ್ಲದೇ ಪ್ರಧಾನಿ ನರೇಂದ್ರ ಮೋದಿರವರು ರೈತರಿಗೆ  ಪ್ರತಿಭಟನೆ ಮತ್ತು ಆಂದೋಲನವನ್ನು ಕೈ ಬಿಡುವಂತೆ  ಮನವಿ ಮಾಡಿಕೊಂಡಿದ್ದಾರೆ.  
Exit mobile version