Site icon PowerTV

ಮೋದಿಯವರು ರೈತರನ್ನು ಮುಗಿಸಿದ್ದಾರೆ : ತ್ಯಾಗರಾಜ ಕದಮ್

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮೋದಿಯವರು ರೈತರ ಕೊಲೆ ಮಾಡಿದ್ದಾರೆ ಎಂದು ರೈತ ಮುಖಂಡ ತ್ಯಾಗರಾಜ ಕದಮ್ ಆರೋಪ ಮಾಡಿದ್ದಾರೆ.

ರೈತರ ಆಕ್ರೋಶಕ್ಕೆ ಗುರಿಯಾಗಿದ್ದ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದರು,ಈ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ರೈತ ಮುಖಂಡ ತ್ಯಾಗರಾಜ ಕದಮ್ ಪ್ರತಿಕ್ರಿಯಿಸಿದ್ದು, ಕೃಷಿ ಮಸೂದೆ ಮಂಡಿಸಿ ಅಂತ ಯಾರೂ ಕೂಡ ಮೋದಿ ಬಳಿ ಹೋಗಿರಲಿಲ್ಲ, ಆದರೆ ಒಂದು ವರ್ಷದಿಂದ ಈ ಕಾಯ್ದೆ ಹಿಂಪಡಿಸಲು ಹಲವಾರು ರೈತರು ಪ್ರಾಣ ಕಳೆದುಕೊಂಡಿದ್ದಾರೆ.

ಹಾಗಾಗಿ ಮೋದಿಯವರೇ ರೈತರ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದು, ಕೃಷಿ ಕಾಯ್ದೆಯನ್ನು ಜಾರಿಗೆ ತರದಿದ್ದರೆ ರೈತ ಒಕ್ಕೂಟವು ಪ್ರತಿಭಟನೆ ಮಾಡುತ್ತಿರಲಿಲ್ಲ ಹಾಗು ಆವರೆಲ್ಲರೂ ಪ್ರಾಣವನ್ನು ಕಳೆದುಕೊಳ್ಳತಿರಲಿಲ್ಲ. ಇದಕ್ಕೆಲ್ಲಾ ಮೋದಿ ಸರ್ಕಾರವೇ ಕಾರಣ ಎಂದು ತ್ಯಾಗರಾಜ ಕದಮ್ ಪ್ರತಿಕ್ರಿಯಿಸಿದ್ದಾರೆ.

Exit mobile version