Site icon PowerTV

ಮುತಾಲಿಕ್ ಬಂಧನ : ಶ್ರೀರಾಮ ಸೇನೆ ಕಾರ್ಯಕರ್ತರಿಂದ ಸರ್ಕಾರದ ವಿರುದ್ಧ ಆಕ್ರೋಶ

ಗದಗ : ಗದಗ ನಗರದ ಹುಯಿಲಗೋಳ ನಾರಾಯಣ ವೃತ್ತದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

ನವೆಂಬರ್ 13 ದತ್ತ ಮಾಲಾಧಾರಿಗಳು ಚಿಕ್ಕಮಗಳೂರಿನ ಬಾಬಾಬುಡ್​ನಗಿರಿಯ ದತ್ತಪೀಠಕ್ಕೆ ಹೊರಟಿದ್ದರು. ಕೋಲಾರದ ಶ್ರೀರಾಮ ಸೇನೆ ಕಾರ್ಯಕರ್ತರು ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಒಂದು ಮಿನಿ ಬಸ್​ನಲ್ಲಿ ಹೊರಟಿದ್ದರು. ಬಸ್​ನಲ್ಲಿ ಜೈ ಶ್ರೀರಾಮ್ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿಕೊಂಡು ಹೋಗುತ್ತಿದ್ದ ಈ ವೇಳೆ ಕೋಲಾರದ ಕ್ಲಾಕ್ ಟವರ್ ಬಳಿಯ ವಿಶಾಲ್ ಮಾರ್ಟ್ ಎದುರು ಏಕಾಏಕಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಈ ಘಟನೆ ಖಂಡಿಸಿ ಇಂದು ಶ್ರೀರಾಮ ಸೇನೆ ಕಾರ್ಯಕರ್ತರು ಕೋಲಾರ್ ಬಂದ್ ಮಾಡಲಾಗಿತ್ತು. ಈ ಬಂದ್ ಗೆ ಪ್ರಮೋದ ಮುತಾಲಿಕ್​ರವರು ಬಾರದಂತೆ ಪೋಲಿಸರು ನಿರ್ಭಂದ ಹೇರಿದ್ದರು. ಆದರೂ ಸಹ ಮುತಾಲಿಕ್​ ತೆರಳಲು ಮುಂದಾದಾಗ ತಡೆದು ಬಂಧಿಸಿದ್ದಾರೆ.

ಮುತಾಲಿಕ್ ಬಂಧನ ಖಂಡಿಸಿ ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಭಾವಚಿತ್ರ ಹಿಡಿದು, ಇಬ್ಬರ ಭಾವಚಿತ್ರಕ್ಕೂ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

Exit mobile version