Site icon PowerTV

ಅಲ್ಲಿ ಒಂದಿನ ನಾನ್​ವೆಜ್​ ಆದರೆ ಇಲ್ಲಿ ಪ್ರತಿದಿನ ನಾನ್​ವೆಜ್​ ಎಲ್ಲಿ ಗೊತ್ತಾ?

ಕರಾವಳಿ ಅಂದ್ರೆ ವಿವಿಧ ವೈವಿಧ್ಯತೆ. ಇದು ಕೇವಲ ಒಂದು ವಿಷಯಕ್ಕೆ ಫೇಮಸ್​ ಅಲ್ಲ.. ಇಲ್ಲಿರೋ ಅದೆಷ್ಟೋ ವಿಷ್ಯ ಫೇಮಸ್​ ಆಗಿವೆ. ಅದರ ಬಗ್ಗೆ ಮಾತಾಡೋಕೆ ಈ ಒಂದು ಆರ್ಟಿಕಲ್​ ಸಾಕಾಗಲ್ಲ. ಇವತ್ತಿನ ಆರ್ಟಿಕಲ್​ನ ಫುಡ್​ ಗೆ ಸೀಮಿತಪಡಿಸೋಣ.

ಒಂದೊಂದೆ ಫುಡ್​ ಬಗ್ಗೆ ಇವತ್ತು ಮಾತಾಡೋಣ.
ಕರಾವಳಿಯ ಊಟ ಉಪಚಾರಗಳು, ಕೆಲವರಿಗೆ ಇಲ್ಲಿನ ಊಟ ಅಷ್ಟು ಇಷ್ಟ ಆಗಲ್ಲ. ಯಾಕಂದ್ರೆ ಕರಾವಳಿಯ ಊಟಕ್ಕೆ ಬೆಂಗಳೂರಿಗರು ಬಳಸದೇ ಇರೋ ವಸ್ತುಗಳ ಬಳಕೆ ಆಗುತ್ತೆ. ತೆಂಗಿನ ಎಣ್ಣೆ ಇಲ್ಲಿನ ಖಾದ್ಯದ ಪ್ರಥಮ ವಸ್ತು. ತೆಂಗಿನ ಎಣ್ಣೆ ಇಲ್ಲ ಅಂದ್ರೆ ಅದೆಷ್ಟೋ ಅಡುಗೆಗಳು ಇಲ್ಲಿ ಆಗೋದೆ ಇಲ್ಲ. ಆದ್ರೆ ಕೆಲವರಿಗೆ ತೆಂಗಿನ ಎಣ್ಣೆಯ ವಾಸನಯೇ (ಪರಿಮಳವೇ) ಆಗೋದಿಲ್ಲ.

ಇನ್ನೂ ತೆಂಗಿನ ಕಾಯಿ. ಬಹುತೇಕ ಖಾದ್ಯಗಳಲ್ಲಿ ತೆಂಗಿನ ಕಾಯಿಯ ಬಳಕೆ ಆಗುತ್ತದೆ. ಎರಡು ಕಾರಣಗಳಿವೆ. ಒಂದು. ಊಟದ ರುಚಿ ಹೆಚ್ಚಿಸೋದಕ್ಕೆ. ಇನ್ನೊಂದು ಸ್ವಾರ್ಥ ಸಾಧನೆಗಾಗಿ. ಅಂದ್ರೆ ಬಹುತೇಕ ಕೂಡುಕುಟುಂಬಗಳಿರುವ ಕರಾವಳಿಯಲ್ಲಿ ಹೆಚ್ಚು ಹೆಚ್ಚು ಅಡಿಗೆ ಮಾಡಬೇಕಾದ ಅವಶ್ಯಕಥೆ ಇದ್ದಾಗ ಇಲ್ಲಿನವರು ಅಡುಗೆಯ ಅಡುಗೆಯ ಕ್ವಾಂಟಿಟಿ ಹೆಚ್ಚಿಸಲು ಕಾಯಿ ಬಳಸುತ್ತಿದ್ದರಂತೆ. ಹಾಗಾಗಿ ಕಾಯಿ ಬಳಕೆ ಇಲ್ಲಿ “ಮಸ್ಟ್​ and ಶುಡ್​…”

ಇನ್ನು ಕರಾವಳಿಯ ಮಾಂಸಾಹಾರಿಗಳ ಬಾಯಿರುಚಿ ಬಗ್ಗೆ ಮಾತಾಡಲೇ ಬೇಡಿ. ಬೆಂಗಳೂರಲ್ಲಿ ಒಂದು ದಿನ ನಾನ್​-ವೆಜ್​ ಮಾಡಿದ್ರೆ, ಕರಾವಳಿಯಲ್ಲಿ ಕೇವಲ ಒಂದೇ ದಿನ ವೆಜ್​ ಮಾಡೋದು. ಇಲ್ಲಿನವರಿಗೆ ಮೀನಿನ ವಾಸನೆಯಾದ್ರು ಕನಿಷ್ಟ ಪಕ್ಷ ಬೇಕೇ ಬೇಕು…

ಕರಾವಳಿ ಊಟದ ಬಗ್ಗೆ ಇನ್ನೂ ತಿಳಿದುಕೊಳ್ಳುವ ಆಸಕ್ತಿ  ಇದ್ಯಾ?…. ಹಾಗಾದ್ರೆ “ Stay Tuned”….

Exit mobile version