Site icon PowerTV

ಕಾಂಗ್ರೆಸ್ ತನ್ನ ಉಳಿವಿಗಾಗಿ ಸುಳ್ಳು ಹೇಳ್ತಿದೆ : ನಳೀನ್ ಕುಮಾರ ಕಟೀಲ್

ಕೊಪ್ಪಳ : ಕೊಪ್ಪಳದ ಜನ ಸ್ವರಾಜ್ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಬಿಜೆಪಿ ಸರ್ಕಾರದ ಆಡಳಿತ ಬಗ್ಗೆ ಹೇಳಿದ್ದಾರೆ.

ಪಂಚಾಯತ್ ಸದಸ್ಯರಿಗೆ ಕಾಂಗ್ರೆಸ್ ಗೌರವ ಕೊಟ್ಟಿಲ್ಲ, ಬಿಜೆಪಿ ಸರ್ಕಾರ ಮಾತ್ರ ಪಂಚಾಯತ್ ಸದಸ್ಯರಿಗೆ ಇದುವರೆಗೂ ಗೌರವ ನೀಡುತ್ತಾ ಬಂದಿದೆ. ಅಲ್ಲದೆ ಗ್ರಾಪಂ ಸದಸ್ಯರಿಗೆ ಸ್ವಾಭಿಮಾನದ ಬದುಕು ಕೊಟ್ಟಿದ್ದರೆ ಅದು ಬಿಜೆಪಿ ಮಾತ್ರ. ಗ್ರಾಪಂ ಸದಸ್ಯರ ಗೌರವ ಧನ 10 ಸಾವಿರ ಏರಿಕೆಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ, ಹಾಗೂ ಕೇರಳದಲ್ಲಿ ಗ್ರಾಪಂ ಸದಸ್ಯರಿಗೆ ಕಾರು ಇದೆ. ಅದೇ ರೀತಿ ಎಲ್ಲ ಸೌಲಭ್ಯ ನೀಡಲು ಬಿಜೆಪಿ ಸಿದ್ಧವಿದೆ. ಅದಕ್ಕಾಗಿ ಪಂಚಾಯತ್ ಸದಸ್ಯರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ.ಅದುವಲ್ಲದೆ ವಿಧಾನ ಪರಿಷತ್ ನಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳೆ ಹೆಚ್ಚು ಆಯ್ಕೆ ಆಗ್ತಾರೆ.ಬಸವರಾಜ ಬೊಮ್ಮಾಯಿರವರ ಆಡಳಿತವನ್ನು ಜನ‌ರು ಮೆಚ್ಚಿದ್ದಾರೆ.

ಕಾಂಗ್ರೆಸ್ ಸುಳ್ಳು, ಮೋಸ,‌ ವಂಚನೆಯಿಂದ ಆಡಳಿತ ಮಾಡಿದೆ. ಮತ್ತು ರೆಫೇಲ್​ನಲ್ಲಿ ಹಗರಣ ಮಾಡಿದ್ದು ಕಾಂಗ್ರೆಸ್ ‌ಎಂಬುದು ಎಲ್ಲರಿಗೂ ಗೊತ್ತಿದೆ , ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲೇ ನಲಪಾಡ್ ವಿದ್ವತ್ ಮೇಲೆ ಹಲ್ಲೆ ಮಾಡಿದ್ದರು.ಈ ಗಲಾಟೆಗೆ ಕಾರಣ ಬಿಟ್ ಕಾಯಿನ್ ಎಂದು ಕುಮಾರಸ್ವಾಮಿ ಹೇಳಿದ್ದರು. ಪ್ರತಿಪಕ್ಷ ನಾಯಕರು ತನ್ನ ಉಳಿವಿಗಾಗಿ ಜನರ ಹತ್ತಿರ ಸುಳ್ಳು ಹೇಳ್ತಿದೆ, ಜನರಿಗೆ ವಂಚನೆ ಮಾಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿಕೆ ನೀಡಿದ್ದಾರೆ.

Exit mobile version