Site icon PowerTV

ಇನ್ನೂ 25 ವರ್ಷವಾದ್ರೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ

ಕಾರವಾರ : ಇನ್ನೂ 25 ವರ್ಷವಾದರೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಅದೊಂದು ಮುಳುಗುತ್ತಿರುವ ಹಡಗು, ಅದರಲ್ಲಿ ಕಾಲಿಡಲು ಯಾರೂ ಮುಂದಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ವಿಧಾನ ಪರಿಷತ್ ಚುನಾವಣೆಯಲ್ಲಿ ಈ ಹಿಂದೆ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಿಂದಲೇ ಪ್ರವಾಸ ಪ್ರಾರಂಭಿಸಲಾಗಿದೆ.ನಾನೇ ಅಭ್ಯರ್ಥಿ ಎಂದು ತಿಳಿದುಕೊಂಡು ಎಲ್ಲರೂ ಕೆಲಸ ಮಾಡಬೇಕು. ಮತ್ತೊಮ್ಮೆ ಬೇಕಾದರೂ ಜಿಲ್ಲೆಗೆ ಬರಲು ಸಿದ್ದನಿದ್ದೇನೆ. ಆದರೆ ಕ್ಷೇತ್ರವನ್ನೂ ಈ ಭಾರಿ ಗೆಲ್ಲಿಸಲೇಬೇಕು ಎಂದರು.

ದೇಶದ ಇತಿಹಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಕ್ಕಿರುವುದು ನಮ್ಮ ಸೌಭಾಗ್ಯ. ಅಟಲ ಬಿಹಾರ್ ವಾಜಪೇಯಿ ನಂತರ ದೇಶದಲ್ಲಿ ಅಮೂಲಾಗ್ರ ಬದಲಾವಣೆ ತರಲು ಮೋದಿ ಬಂದಿದ್ದಾರೆ. ಇನ್ನು ೨೫ ವರ್ಷವಾದರೂ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ರಾಹುಲ್ ಗಾಂಧಿಗೆ ಎಲ್ಲಿಯೂ ಜನಮನ್ನಣೆ ಸಿಗ್ತಾ ಇಲ್ಲದ ಸ್ಥಿತಿ ನಾವು ನೋಡಿದೇವೆ ಎಂದರು.

ರಾಹುಲ್ ಗಾಂಧಿ ದೇಶದಲ್ಲಿ ಎಲ್ಲಿಯೂ ಜನಮನ್ನಣೆ ಸಿಗುತ್ತಿಲ್ಲ. ಆದರೆ ವಿದೇಶಕ್ಕೆ ಯಾಕೇ ಹೋಗುತ್ತಾರೋ ಬರ್ತಾರೊ ಗೊತ್ತಿಲ್ಲ. ಆ ಪಕ್ಷ ಎಷ್ಟು ದುರ್ಬಲವಾಗಿದೆ ಎಂದು ಇದರಿಂದ ಗೊತ್ತಾಗುತ್ತಿದೆ ಎಂದು ಹೇಳಿದರು.
75 ಎಂಎಲ್ಸಿ ಇರುವ ಕಡೆ ಇನ್ನು 12 ಸದಸ್ಯ ಅವಶ್ಯಕತೆ ಇದನ್ನು ಸಹ ಈ ಚುನಾವಣೆ ಮೂಲಕ ಸ್ಪಷ್ಟ ಬಹುಮತ ಪಡೆಯಬೇಕಾಗಿದೆ. ಇದಕ್ಕೆ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಇದು ಜಿಲ್ಲಾ ಪಂಚಾಯತಿ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಸದಸ್ಯರು ರಾಜೀನಾಮೆ ನೀಡಲು ಹಿಂದೆಮುಂದೆ ನೋಡುವ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ಈ ವೇಳೆ ನಾನು ಕಣ್ಣೀರು ಹಾಕಿದ್ದಕ್ಕೆ ಹಲವರು ಟೀಕೆ ಮಾಡಿದರು. ಆದರೆ ನಾನು ಕಣ್ಣೀರು ಹಾಕಿದ್ದು ನನ್ನ ಶಿಕಾರಿಪುರ ಜನ ಹಾಗೂ ರಾಜ್ಯದ ಜನ ತೋರಿದ ಪ್ರೀತಿಯಿಂದಾಗಿ ಕಣ್ಣೀರು ಬಂದಿದೆ ವಿನಾಃ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕಲ್ಲ. ನಾನು ಅಂದು ಶಾಸಕರು, ಸಚಿವರುಗಳಿಗೆ ಸ್ವತಃ ಸಿಹಿ ಊಟ ಹಾಕಿದ್ದೇವೆ ಎಂದು ಹೇಳಿದರು.

ಉದಯ ಬರ್ಗಿ ಪವರ್ ಟಿವಿ ಕಾರವಾರ

Exit mobile version