Site icon PowerTV

ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರತೆ

ಬೆಂಗಳೂರು : ದೇಶದಲ್ಲಿ ಇಂದೂ ಕೂಡ ಇಂಧನ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬಂದಿಲ್ಲ. ಇದರಿಂದ ರಾಜ್ಯದ ಜನರು ತುಸು ನೆಮ್ಮದಿಯಾಗಿದ್ದಾರೆ .

ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾದ ಬಳಿಕ ಯಾವುದೇ ನಗರಗಳಲ್ಲಿ ಇಂಧನ ದರದಲ್ಲಿ ಏರಿಳಿತಗಳಾಗಿಲ್ಲ. ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ , ಸೆಸ್  ವ್ಯಾಟ್ ಕಡಿಮೆ ಮಾಡಿದ್ದರಿಂದ , ಪ್ರಮುಖ ಎಲ್ಲಾ ಪಟ್ಟಣಗಳಲ್ಲಿ ಯಥಾಸ್ಥಿತಿಯಲ್ಲಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿ ಇಂದಿಗೆ 13 ದಿನ ಕಳೆದಿವೆ. 13 ದಿನದ ನಂತರದಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ದೇಶದ ಪ್ರಮುಖ ಮಹಾ ನಗರಗಳಲ್ಲಿಯೂ ಕೂಡ ಇಂಧನ ದರ ಸ್ಥಿರತೆಯಲ್ಲಿದೆ.

 

 

Exit mobile version