Site icon PowerTV

ಬೆಂಗಳೂರು ಹಂಸವಿದ್ದಂತೆ; ಸಿಎಂ ಬಸವರಾಜ್​ ಬೊಮ್ಮಾಯಿ

ಬೆಂಗಳೂರು: ಬೆಂಗಳೂರು ಅನ್ನುವುದು ಹಂಸ ಪಕ್ಷಿವಿದ್ದಂತೆ ಈ ಹಂಸ ಸರಸ್ವತಿ ವಾಹನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಬೆಂಗಳೂರು ಟೆಕ್​ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಂಸ ಪಕ್ಷಿ ಬಹಳ ಎತ್ತರಕ್ಕೆ ಹಾರುತ್ತದೆ. ಮಾನಸ ಸರೋವರದಲ್ಲಿ ಹಂಸಗಳು ‌ಕಾಣಿಸುತ್ತವೆ. ಯಾವುದೇ ಹದ್ದುಗಳು ಅಲ್ಲಿ ಕಾಣಿಸುವುದಿಲ್ಲ, ಅದೇ ರೀತಿ ಬೆಂಗಳೂರು ಹಂಸದ ನಗರ, ಸರಸ್ವತಿಯ ನಗರ ಎಂದು ಬಣಿಸಿದ್ದಾರೆ.

ಸದ್ಯ ಹೊಸ ಕರ್ನಾಟಕದಂದ ನವ ಭಾರತ ನಿರ್ಮಾಣವಾಗಲಿದೆ. ಪ್ರಧಾನಿ ‌ಮೋದಿ ಆಶಯ‌ ಕೂಡ ಅದೇ ಆಗಿದೆ. ಆತ್ಮನಿರ್ಭರ್ ಭಾರತ, ಮೆಕ್ ಇನ್ ಇಂಡಿಯಾದ ಮೂಲಕ ಹೊಸ ಭಾರತ ಕಟ್ಟಲು ಮೋದಿ ಶ್ರಮಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಕಾರ್ಯಕ್ರಮಗಳ ಬಗ್ಗೆ ಸಿಎಂ ಹೆಮ್ಮೆಯಿಂದ ಹೇಳಿಕೊಂಡರು.

ಈ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಸಚಿವರಾದ ಅಶ್ವಥ್ ನಾರಾಯಣ್​, ಮುರುಗೇಶ್ ನಿರಾಣಿ ಭಾಗಿಯಾಗಿದ್ದರು.

Exit mobile version