Site icon PowerTV

ಹಂಸಲೇಖ ವಿರುದ್ಧ ಬಿಜೆಪಿ ಕ್ಯಾ.ಗಣೇಶ್ ಕಾರ್ಣಿಕ್ ಕಿಡಿ

ಬೆಂಗಳೂರು : ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ವಕ್ತಾರರಾದ ಕ್ಯಾ.ಗಣೇಶ್ ಕಾರ್ಣಿಕ್ ಮತ್ತು ಮಹೇಶ್​ರವರು ಸುದ್ದಿಗೋಷ್ಢಿ ನಡೆಸಿದ್ದು, ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಪೇಜಾವರ ಶ್ರೀಗಳ ಟೀಕೆ ಕೆಟ್ಟ ಚಾಳಿ. ಹಂಸಲೇಖರವರಂತ ವ್ಯಕ್ತಿ ಇಷ್ಟೊಂದು ಕೀಳುಮಟ್ಟಕ್ಕೆ ಇಳಿತ್ತಾರೆ ಅಂತಾ ಗೊತ್ತಿರಲಿಲ್ಲ. ಈಗಾಗಲೇ ಅವ್ರು ಕ್ಷಮೆ ಕೇಳಿದ್ದಾರೆ. ಬಹುಶಃ ಅವರಿಗೆ ಬುದ್ದಿ ಭ್ರಮಣೆ ಆಗಿತ್ತು. ನಿಜಕ್ಕೂ ಕೂಡ ಹಿಂದೂ ಸಮಾಜ ಅವರ ಹೇಳಿಕೆಯನ್ನು ಖಂಡಿಸುತ್ತದೆ.

ಹಂಸಲೇಖ ಅವರಿಗೆ ದೇವರು ಒಳ್ಳೆ ಬುದ್ದಿ ಕೊಡಲಿ. ಪೇಜಾವರ ಶ್ರೀ ಗಳ ಜೀವನದ ಬಗ್ಗೆ ತಿಳಿದುಕೊಳ್ಳಲಿ. ಒಳ್ಳೆಯದನ್ನು ಅವರು ತಿಳಿಯುವ ಪ್ರಯತ್ನ ಮಾಡಲಿ. ಸೆಲೆಬ್ರಿಟಿಯಾಗಿ ಪ್ರಸಿದ್ಧ ಪಡೆದ ವ್ಯಕ್ತಿ ಸಮಾಜಕ್ಕೆ ಒಳ್ಳೆಯದು ಮಾಡಲಿ. ಪುನೀತ್ ರಾಜ್ ಕುಮಾರ್ ಎಲೆಮರೆಕಾಯಿ ತರ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರಂತೆ ಒಳ್ಳೆಯತನದಿಂದ ಹಂಸಲೇಖ ನಡೆಯಲಿ ಎಂದು ಗಣೇಶ್ ಕಾರ್ಣಿಕ್ ಹೇಳಿಕೆ ನೀಡಿದ್ದಾರೆ.

Exit mobile version