Site icon PowerTV

ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ

ಅಪಘಾತವಾಗಿ ಬಿದ್ದಿದ್ದ ಗಾಯಾಳುಗಳನ್ನ ತಮ್ಮ ಎಸ್ಕಾರ್ಟ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ ಹೋಂ ಮಿನಿಸ್ಟರ್.

ಹೌದು, ಗೃಹಮಂತ್ರಿ ಆರಗ ಜ್ಞಾನೇಂದ್ರ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ವೇಳೆ ಶಿವಮೊಗ್ಗ ಮಂಡಗದ್ದೆ ಕಾಡಿನಲ್ಲಿ ತಿರುವಿನಲ್ಲಿ ಸ್ಪೀಡಾಗಿ ಬಂದು ಬೈಕ್ ಸವಾರರು ಚರಂಡಿಗೆ ಬಿದ್ದಿದ್ದರು.

ತಕ್ಷಣ ಅಪಘಾತ ಗಮನಿಸಿದ ಗೃಹಸಚಿವರು, ತಕ್ಷಣ ಕಾರಿನಿಂದ ಇಳಿದು, ನೀರು ಕುಡಿಸಿ ತಮ್ಮ ಗಸ್ತುವಾಹನದಲ್ಲಿ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದರು. ತಕ್ಷಣ ಪ್ರಥಮ ಚಿಕಿತ್ಸೆ ಮಾಡಿಸಿದರು. ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಬೈಕ್ ಸವಾರರ ಜೀವ ಉಳಿಸಿದರು.

ಗೃಹ ಸಚಿವರ ಈ ಕಾರ್ಯಕ್ಕೆ ಪ್ರಶಂಸೆಗಳ ಸುರಿಮಳೆ ಕೇಳಿಬರುತ್ತಿದ್ದು, ಎಲ್ಲಾ ರಾಜಕಾರಣಿಗಳು ಇದೆ ರೀತಿ ಮಾನವೀಯತೆ ಮೆರೆಯುವ ಅಗತ್ಯ ಇದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟರು.

Exit mobile version