ಬಿಟ್​​ ಕಾಯಿನ್​ ಪ್ರಕರಣ: ದೊಡ್ಡ ದೊಡ್ಡ ನಾಯಕರ ಮಕ್ಕಳು ಭಾಗಿ

ಶಿವಮೊಗ್ಗ: ಬಿಟ್​​ ಕಾಯಿನ್​ ಪ್ರಕರಣ ಕಳೆದ ಒಂದು ವರ್ಷದಿಂದ ನಡೆಯುತ್ತಿದೆ. ಆರೋಪಿ ಶ್ರೀಕೃಷ್ಣ ಎಂಬಾತ ಕಳೆದ ಒಂದು ವರ್ಷದ ಹಿಂದೆ ಬಂಧಿತನಾಗಿದ್ದಾನೆ ಎಂದು ಜಿಲ್ಲೆಯ ಕಾಂಗ್ರೆಸ್​ ಅಧ್ಯಕ್ಷ ಹೆಚ್​.ಎಸ್​ ಸುಂದರೇಶ್​ ಅವರು ಹೇಳಿದ್ದಾರೆ.

ಇಂದು ಶಿವಮೊಗ್ಗದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಆತನ ಬಂಧನದ ನಂತರ ಎಲ್ಲಾ ವಿಷಯವು ಗೊತ್ತಾಗಿದೆ. ಸರ್ಕಾರಿ ಹಣವನ್ನು ಲೂಟಿ ಮಾಡಿರುವುದು ಗೊತ್ತಾಗಿದೆ ಎಂದಿದ್ದಾರೆ.

ಸದ್ಯ ಪ್ರಕರಣದಲ್ಲಿ ಬಿಜೆಪಿ ದೊಡ್ಡ ದೊಡ್ಡ ನಾಯಕರು, ನಾಯಕರ ಮಕ್ಕಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದಾರೆ. ಆದರೆ, ಬಿಜೆಪಿ ನಾಯಕರುಗಳು ಕಾಂಗ್ರೆಸ್ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್​ನವರು ಯಾರಾದರೂ ಇದ್ದರೆ ಬಂಧಿಸಲಿ, ನಮ್ಮ ಅಭ್ಯಂತರ ಇಲ್ಲ. ಶಿವಮೊಗ್ಗ ಜಿಲ್ಲೆಯ ದೊಡ್ಡ ದೊಡ್ಡ ನಾಯಕರ ಮಕ್ಕಳು ಇರಬಹುದು. ಮಾಧ್ಯಮಗಳಲ್ಲಿ ಪ್ರಭಾವಿ ಬಿಜೆಪಿ ನಾಯಕರು, ನಾಯಕರ ಮಕ್ಕಳು ಇದ್ದಾರೆ ಎಂಬ ಬಗ್ಗೆ ಸುದ್ದಿ ಬರುತ್ತಿದೆ. ತನಿಖೆ ನಡೆದರೆ ಗೊತ್ತಾಗುತ್ತದೆ ಎಂದು ಸುಂದರೇಶ್​ ಅವರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES