Site icon PowerTV

ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆದ್ದುಬೀಗಿದ ಮಂಗಳಾ ಅಂಗಡಿ..!

ಬೆಳಗಾವಿ: ಅಂತಿಮ ಸುತ್ತಿನ ಮತ ಎಣಿಕೆಯವರೆಗೂ ರೋಚಕತೆಯಿಂದ ಸಾಗಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶದಲ್ಲಿ ಮಂಗಳಾ ಅಂಗಡಿ ಜಯ ಸಾಧಿಸಿದ್ದಾರೆ. 3,986 ಮತಗಳ ಅಂತರದಿಂದ ಮಂಗಳಾ ರೋಚಕ ಗೆಲುವು ಸಾಧಿಸಿ ಲೋಕಸಭೆಗೆ ಪ್ರವೇಶ ಪಡೆದಿದ್ದಾರೆ.

ಆರಂಭಿಕ ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಮಂಗಳಾ ಅಂಗಡಿ ನಂತರ ಹಿನ್ನಡೆ ಅನುಭವಿಸಿದ್ದರು. 35 ಸುತ್ತುಗಳಲ್ಲಿಯೂ ಸತೀಶ್​ ಜಾರಕಿಹೊಳಿ ಸತತವಾಗಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ 80 ನೇ ಸುತ್ತಿನಲ್ಲಿ ಅಂತಿಮವಾಗಿ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿ, ನಿಟ್ಟುಸಿರು ಬಿಟ್ಟಿದ್ದಾರೆ.

Exit mobile version