Site icon PowerTV

ಶ್ರೀರಂಗಪಟ್ಟಣದಲ್ಲಿ ತಹಸೀಲ್ದಾರ್ ಬಳಸಿದ “ಆ ಪದಕ್ಕೆ” ಶಾಸಕ ಫುಲ್ ಗರಂ

ಮಂಡ್ಯ :  ಕಳೆದ 3 ದಿನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಸರ್ಕಾರಿ ಕಾರ್ಯಕ್ರಮವನ್ನ ಆಯೋಜಿಸಿದ್ರು. ಆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ರು. ಆ ಕಾರ್ಯಕ್ರಮದಲ್ಲಿ ಸ್ಥಳೀಯ ಅಧಿಕಾರಿಗಳ ನಡೆ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ಹೊರ ಹಾಕಿದ್ರು. ಈ ವೇಳೆ ಮದ್ಯ ಪ್ರವೇಶಿಸಿದ ತಹಸೀಲ್ದಾರ್ ರೂಪ ಅವರನ್ನ ಶಾಸಕರು ಸೆಟಪ್ ಅಂತೇಳಿ ಗದರಿದ್ರು. ಇದಕ್ಕೆ ಪ್ರತಿಯಾಗಿ ತಹಸೀಲ್ದಾರ್ ರೂಪ ಅವರು “ಯೂ ಸೆಟಪ್” ಅಂತಾ ಏಕ ವಚನದಲ್ಲೇ  ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ತಿರುಗೇಟು ನೀಡಿದ್ರು. ಈ ವೇಳೆ ಶಾಸಕ-ತಹಸೀಲ್ದಾರ್ ನಡುವೆ ಮಾತಿನ ಚಕಮಕಿ ಜೋರಾಗಿಯೇ ನಡೆದಿದ್ದು, ತಹಸೀಲ್ದಾರ್ ನಡೆಯನ್ನ ಸಚಿವ ಮತ್ತು ಹಿರಿಯ ಅಧಿಕಾರಿಗಳು ಸಮರ್ಥಿಸಿಕೊಂಡಿದ್ರು.

ಅಂದು ಹಾಕಿದ ಸವಾಲಿನಂತೆ ಜನಸಂಪರ್ಕ ಸಭೆಗೆ ಶಾಸಕರು ದಿನಾಂಕ ನಿಗಧಿ ಮಾಡಿದ್ರು. ಆದ್ರೆ, ತಹಸೀಲ್ದಾರ್ ರೂಪ ಕೊರೋನಾ ನೆಪ ಹೇಳಿ ಶಾಸಕರು ನಿಗಧಿ ಮಾಡಿದ್ದ ಸಭೆಯನ್ನ ಏಕಾಏಕಿ ರದ್ದು ಮಾಡಿದ್ರು. ಡಿಸಿ ಬಳಿಗೆ ತೆರಳಿದ ಶಾಸಕರು ವಿಶೇಷ ಅನುಮತಿ ಪಡೆದು ಸಭೆ ನಿಗಧಿ ಮಾಡಿಸಿದ್ರು. ನಿಗಧಿಯಂತೆ ಇಂದು ನಡೆದ ಸಭೆಯಲ್ಲಿ ಸಮಸ್ಯೆಗಳು ಹಾಗೂ ಪರಿಹಾರ ಸಿಗದ ತಾವು ಕೊಟ್ಟ ಅರ್ಜಿಗಳನ್ನ ಹಿಡಿದು ನೂರಾರು ಮಂದಿ ಸೇರಿದ್ರು.

ಇಂದಿನ ಜನಸಂಪರ್ಕ ಸಭೆಯಲ್ಲಿ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೊಡಿಸುವ ಕೆಲಸ ಮಾಡಲಾಯ್ತು. ಈ ವೇಳೆ ಸ್ಥಳದಲ್ಲಿದ್ದ ಶಾಸಕರ ಬೆಂಬಲಿಗರು, ಸಾರ್ವಜನಿಕರು ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದ್ರು. ಇನ್ನು ಆಕ್ಷೇಪಾರ್ಹ ಅರ್ಜಿಗಳನ್ನ ಹೊತುಪಡಿಸಿ, ತಾಂತ್ರಿಕ ಸಮಸ್ಯೆ ಹಾಗೂ ಇತರೆ ಸಮಸ್ಯೆ ಇರುವ ಅರ್ಜಿಗಳಿಗೆ ಇಂತಿಷ್ಟು ದಿನಗಳ ಕಾಲಾವಕಾಶ ಪಡೆದು ಇತ್ಯರ್ಥ ಮಾಡುವ ಭರವಸೆ ನೀಡಲಾಯ್ತು.

 ಡಿ . ಶಶಿಕುಮಾರ್

Exit mobile version