Site icon PowerTV

ನಾನು ಸಿಎಂ ವಿರುದ್ಧ ಯಾರಿಗೂ ದೂರು ನೀಡಿಲ್ಲ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ನಾನು ಸಿಎಂ ವಿರುದ್ಧ ಯಾರಿಗೂ ದೂರು ನೀಡಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಸ್ಪಷ್ಟನೆ ಪಡಿಸಿದ್ದಾರೆ.

ನಾನು ಅನುಭವದ ಆಧಾರದ ಮೇಲೆ ಆಡಳಿತ ನಡೆಸುತ್ತಿದ್ದೇನೆ. ನಾನು ರಾಜ್ಯಪಾಲರ ಬಳಿ ಹೋಗಲು ಒಂದು ಕಾರಣವಿದೆ. 14 ಬಾರಿ ಗುಜರಾತ್ ನಲ್ಲಿ ಸಚಿವರಾಗಿ ಬಜೆಟ್ ಮಂಡಿಸಿದ್ದಾರೆ. ಸಿಎಂ ಬಿಡುಗಡೆ ಮಾಡಿದ ಅನುದಾನ ಸರಿನೋ, ತಪ್ಪೋ ಎಂದು ತಿಳಿದುಕೊಳ್ಳುವುದಕ್ಕೆ ಹೋಗಿದ್ದೆ.

ನಾನು ನನ್ನ ಪಕ್ಷದ ವಿರುದ್ಧ ನನ್ನ ಜೀವನದಲ್ಲೇ ದೂರು ನೀಡಲ್ಲ. ಈ ವಿಷಯದ ಬಗ್ಗೆ ಸಿದ್ದರಾಮಯ್ಯನವರೇ ಸ್ಪಷ್ಟನೆ ಕೊಡಲಿ . ಅದು ಬಿಟ್ಟು ಇದಕ್ಕೂ ಆರೋಪ ಮಾಡುವುದು ಬೇಡ ಎಂದು ಶಿವಮೊಗ್ಗದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

 

Exit mobile version