Site icon PowerTV

ನನ್ನ ವೈಯಕ್ತಿಕ ಅಭಿಪ್ರಾಯ ಲಾಕ್​ಡೌನ್ ಬೇಡ : ಡಿ ಕೆ ಶಿವಕುಮಾರ್

ಬೆಂಗಳೂರು : ಕೊರೋನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರಗಳು ತಿಣುಕಾಡುತ್ತಿವೆ. ಲಾಕ್ ಡೌನ್, ಸೆಮಿ ಲಾಕ್ ಡೌನ್, ಕರ್ಫ್ಯೂ ನಂತಹ ಹಲವಾರು ಮಾರ್ಗಗಳನ್ನು ಅನುಸರಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ರಾಜ್ಯ ಸರ್ಕಾರಗಳು ಸಿಕ್ಕಿ ಹಾಕೊಂಡಿವೆ. ನಮ್ಮ ರಾಜ್ಯದಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಆಗಿದೆ ಆದರೂ ಕೊರೋನಾ ಕೇಸ್ ಗಳಲ್ಲಿ ಇಳಿಕೆ ಕಾಣುತ್ತಿಲ್ಲ. ಈ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ವಪಕ್ಷ ಸಭೆ ಕರೆದಿದ್ದಾರೆ. 

ಕೊರೋನಾ 2ನೇ ಅಲೆ ನಿಯಂತ್ರಿಸಲು ಲಾಕ್​ಡೌನ್​ ಜಾರಿ ವಿಚಾರವಾಗಿ ಈ ಸಭೆಯಲ್ಲಿ ತೀರ್ಮಾನಿಸಲು ಸರ್ಕಾರ ನಿರ್ಧರಿಸಿದೆ. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ನನ್ನ ವೈಯಕ್ತಿಕ ಅಭಿಪ್ರಾಯ ಲಾಕ್​ಡೌನ್ ಬೇಡ ಎಂದಿದ್ದಾರೆ. ಲಾಕ್​ಡೌನ್​ಗಿಂತ ಜೀವ ಹಾಗೂ ಜೀವನ ಮುಖ್ಯ, ಸರ್ಕಾರ ಅವರದೇನೋ ಮುಚ್ಚಿಕೊಳ್ಳೋಕೆ ಲಾಕ್​ಡೌನ್ ಎನ್ನುತ್ತಿದ್ದಾರೆ ನಮಗಿನ್ನು ಸರ್ವ ಪಕ್ಷಗಳ ಸಭೆಯ  ನೋಟಿಸ್ ಬಂದಿಲ್ಲ, ನೋಟಿಸ್ ಬಂದ ನಂತರ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ತೇವೆ. ನಮ್ಮನ್ನ ಕರೆಸಿ ಮಾತನಾಡಿದ ಮೇಲೆ ನಮ್ಮ ಸಲಹೆ ಪರಿಗಣಿಸಬೇಕು ಸುಮ್ಮನೆ ಸಭೆ ನಡೆಸಿ ಅವರಿಷ್ಟ ಬಂದಂತೆ ನಡೆದುಕೊಳ್ಳೋದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 

Exit mobile version