Site icon PowerTV

ರಾಯಚೂರಿನ ಮಸ್ಕಿಗೆ ಬರ್ತಿದ್ದಾರೆ ಮಂಗ್ಲಿ

ರಾಯಚೂರು : ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮಂಗ್ಲಿ ಕ್ಯಾಂಪೇನ್‌ ಮಾಡಲಿದ್ದಾರೆ. ರಾಬರ್ಟ್‌ ಚಿತ್ರದ ಕಣ್ಣೇ ಅದಿರಿಂದಿ ಸಾಂಗ್‌ ಮೂಲಕ ಜಗದ್ವಿಖ್ಯಾತರಾಗಿರುವ ಮಂಗ್ಲಿ ಪ್ರತಾಪ್‌ ಗೌಡ ಪಾಟೀಲ್‌ ಪರ ನಾಳೆ ಕ್ಯಾಂಪೇನ್‌ ಮಾಡಲಿದ್ದಾರೆ. ಬೀದರ್‌ ಮತ್ತು ರಾಯಚೂರು ಜಿಲ್ಲೆಯಲ್ಲಿ ಸಖತ್‌ ಫ್ಯಾನ್‌ ಫಾಲೋವರ್ಸ್‌ ಹೊಂದಿರುವ ಮಂಗ್ಲಿ ಯುವಕರ ಸ್ಟಾರ್‌ ಐಕಾನ್‌ ಆಗಿದ್ದಾರೆ. ಹೀಗಾಗಿ ಯುವಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನಾಯಕರು ಮಂಗ್ಲಿಯನ್ನ ಪ್ರಚಾರಕ್ಕೆ ಕರೆತರುತ್ತಿದ್ದಾರೆ. 

Exit mobile version