Site icon PowerTV

ಇನ್ನೂ 2 ದಿನ ವಿಚಾರಣೆಗೆ ಬರಲು ಆಗಲ್ಲ : ರಮೇಶ್ ಜಾರಕಿಹೊಳಿ

ಬೆಂಗಳೂರು : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು SIT ತನಿಖಾ ತಂಡ ನೋಟೀಸ್ ನೀಡಿತ್ತು. ಇಂದು ವಿಚಾರಣೆಗೆ ರಮೇಶ್ ಅವರು ಬರಬಹುದೆಂದು ಅಂದಾಜಿಸಲಾಗಿತ್ತು. ಆದರೆ ರಮೇಶ್ ಅವರ ಆರೋಗ್ಯ ಸ್ಥಿತಿ ಸರಿ ಇರದ ಕಾರಣ ವಿಚಾರಣೆಗೆ ಹಾಜರಾಗುತ್ತಿಲ್ಲ. ರಮೇಶ್ ಜಾರಕಿಹೊಳಿ ಅವರು ಸದ್ಯ  ಬೆಳಗಾವಿಯಲ್ಲಿದ್ದಾರೆ.

ರಮೇಶ್​​ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಹೇಳಿಕೆಯ ಪ್ರಕಾರ ಇನ್ನೂ 2 ದಿನ ವಿಚಾರಣೆಗೆ ಬರಲು ಆಗಲ್ಲ ಎಂದು ರಮೇಶ್ ಜಾರಕಿಹೋಳಿ ಶ್ಯಾಮ್ ಅವರಿಗೆ ತಿಳಿಸಿದ್ದಾರೆ. ಎಸ್​ಐಟಿ ಅಧಿಕಾರಿಗಳಿಗೆ ಈ ವಿಚಾರ ತಿಳಿಸಿರುವ ಶ್ಯಾಮ್ ಸುಂದರ್ ಅವರು, ರಮೇಶ್ ಅವರು ಮೆಡಿಕಲ್ ಪರೀಕ್ಷೆಗೆ ಬೇಕಾದರೆ ಬರ್ತಾರೆ ಎಂದು ಹೇಳಿದ್ದಾರೆ. SITಯವರು ಮತ್ತೊಂದು ನೊಟೀಸ್ ಕೊಡ್ತಿವಿ ಎಂದಿದ್ದಾರೆ. 

 

 

Exit mobile version