Site icon PowerTV

ಇದು ಕರ್ನಾಟಕದ ಹೈ ಪ್ರೊಫೈಲ್ ಕೇಸ್ : ಜಗದೀಶ್

ಬೆಂಗಳೂರು: ಈಗಾಗಲೇ ಮಹಜರು ಪ್ರಕ್ರಿಯೆ ಚುರುಕುಗೊಂಡಿದ್ದು, ಯುವತಿ ಕೊಟ್ಟ 164 ಹೇಳಿಕೆ ಮೇಲೆ ಮಹಜರು ಪ್ರಕ್ರಿಯೆ ನಡೆಯುತ್ತಿದೆ. ದೂರಿಗೆ ಸಾಕ್ಷ್ಯವಾಗಿ ಸಿಕ್ಕ ಬಟ್ಟೆ ಮತ್ತು ಎಲ್ಲಾ ವಸ್ತುಗಳನ್ನು ಎಸ್.ಐ.ಟಿ ವಶಪಡಿಸಿಕೊಂಡಿದ್ದು ಎಫ್.ಎಸ್.ಎಲ್ ಗೆ ಕಳುಹಿಸಿಕೊಡಲಿದೆ.

ಮಂತ್ರಿ ಗ್ರೀನ್ಸ್ ಬಳಿ ಮಹಜರು ನಡೆಯುವ ಸಂದರ್ಭದಲ್ಲಿ ಯುವತಿ ಪರ ವಕೀಲ ಜಗದೀಶ್ ಅವರು ಹೇಳಿಕೆ ನೀಡಿದ್ದು, ಅತ್ಯಾಚಾರಿ ಆರೋಪಿಯನ್ನು ಬಂಧಿಸಲು ಸರ್ಕಾರವೇ ಬಿಡ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.  ಮಾಜಿ ಮಂತ್ರಿಯನ್ನ ಬಂಧಿಸದಂತೆ ಪೊಲೀಸರ ಮೇಲೆ ಸರ್ಕಾರ ಒತ್ತಡ ಹಾಕುತ್ತಿದೆ.

ಇದು ಕರ್ನಾಟಕದ ಹೈ ಪ್ರೊಫೈಲ್ ಕೇಸ್, ಜನರು ಕಾತರದಿಂದ ಕಾಯ್ತಿದ್ದಾರೆ.  ಆರೋಪಿಯನ್ನ ನಾಳೆ ವಿಚಾರಣೆಗೆ ಕರೆದಿದ್ದಾರೆ, ಅರೆಸ್ಟ್ ಮಾಡಿದ್ರೆ ಒಳ್ಳೆಯದು ಎಂದು ಯುವತಿ ಪರ ವಕೀಲ ಜಗದೀಶ್ ಕುಮಾರ್ ಹೇಳಿದ್ದಾರೆ

Exit mobile version