Site icon PowerTV

ಈಶ್ವರಪ್ಪ ವಿರುದ್ಧ ಕಾರ್ಯತಂತ್ರ, ಆಪ್ತರೊಡನೆ ಸಿಎಂ ಸಮಾಲೋಚನೆ

ಬೆಂಗಳೂರು : ಸಿಎಂ ವಿರುದ್ಧ ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದ ಬೆನ್ನಲ್ಲೇ ಯಡಿಯೂರಪ್ಪ ಅವರು ತಮ್ಮ ಆಪ್ತ ವರಿಷ್ಠರೊಡನೆ ಸಮಾಲೋಚನೆ ನಡೆಸಿದ್ದಾರೆ.

ಈಶ್ವರಪ್ಪ ಮೇಲೆ ಕೆಂಡಾಮಂಡಲವಾಗಿರುವ ಸಿಎಂ BSY ತಮ್ಮ ಆಪ್ತ ವಲಯದವರಾದ ಗೃಹ ಸಚಿವ ಬೊಮ್ಮಯಿ, ಆರ್ ಅಶೋಕ್, ಸುಧಾಕರ್, ಬಿಸಿ ಪಾಟೀಲ್​ ಜೊತೆ ಚರ್ಚೆ ನಡೆಸಿದ್ದಾರೆ. ಈಶ್ವರಪ್ಪ ಅವರ ಪತ್ರದಿಂದ ಸರ್ಕಾರಕ್ಕಾದ ಡ್ಯಾಮೇಜ್ ಅನ್ನು ಕಂಟ್ರೋಲ್ ಮಾಡಲು ಎಲ್ಲಾ ಮಂತ್ರಿಗಳಿಗೆ ಸಿಎಂ ಸೂಚಿಸಿದ್ದಾರೆ.

ಸಭೆಯ ಬಳಿಕ ಊಟದ ನೆಪದಲ್ಲಿ ತಾಜ್ ವೆಸ್ಟ್ ಎಂಡ್ ಅಲ್ಲಿ ಮುಖ್ಯಮಂತ್ರಿ ಹಾಗೂ ಅವರ ಆಪ್ತ ವಲಯ ಸೇರಿದ್ದು, ಈಶ್ವರಪ್ಪ ವಿರುದ್ಧ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗ್ತಿದೆ.

 

Exit mobile version