Site icon PowerTV

ಇಂದು ಸದನದಲ್ಲಿ ಕೈ ಶಾಸಕರಿಂದ ಗದ್ದಲ ಸಾಧ್ಯತೆ..!

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನಲೆಯಲ್ಲಿ ಇಂದು ಸದನದಲ್ಲಿ ಕಾಂಗ್ರೆಸ್ ಶಾಸಕರು ಮತ್ತೆ ಗದ್ದಲ ನಡೆಸುವ ಸಾಧ್ಯತೆ ಇದೆ.

ಈಗಾಗಲೇ ವಿಧಾನಸಭೆಯಲ್ಲಿ ಧರಣಿ ಮಾಡುತ್ತಿರುವ ಕೈ ಶಾಸಕರು, ಇಂದು ವಿಧಾನ ಪರಿಷತ್ ನಲ್ಲಿ ಸಿಡಿ ಗದ್ದಲ ಮುಂದುವರೆಸುವ ಸಾದ್ಯತೆ ಇದೆ. ವಿಧಾನಸಭೆಯಲ್ಲಿ ಪ್ರೊಟೆಸ್ಟ್ ನಡೆಸಿದ ರೀತಿಯಲ್ಲೇ ವಿಧಾನಪರಿಷತ್ ನಲ್ಲೂ ಧರಣಿ ನಡೆಸಲು ನಿರ್ಧರಿಸಲಾಗಿದೆ. ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಸಿಡಿ ವಿಚಾರ ಪ್ರಸ್ತಾಪಿಸಲು ಮೇಲ್ಮನೆ ಕೈ ಸದಸ್ಯರಿಗೆ ಸೂಚನೆ ನೀಡಿದ್ದು, ಪಕ್ಷದ ಸದಸ್ಯರ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ.

Exit mobile version