Site icon PowerTV

ಕಾಂಗ್ರೆಸ್ ನವರು ರೈತರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ : ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಮಹಾ ಪಂಚಾಯತ್ ಮುಖಾಂತರ ರೈತರ ಒಳ್ಳೆಯದಕ್ಕೆ ಪ್ರಯತ್ನ ನಡೆಸಿದರೆ, ನನ್ನದೇನು ಅಭ್ಯಂತರವಿಲ್ಲ.  ಆದರೆ, ಮಹಾಪಂಚಾಯತ್ ಹೆಸರಿನಲ್ಲಿ ಕಾಂಗ್ರೆಸ್ ನವರು, ರೈತರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ನೋವು ನನಗಿದೆ ಅಂತಾ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ. 

ಈ ಬಗ್ಗೆ ಕಾಂಗ್ರೆಸ್ ನವರ ಬಗ್ಗೆ ಆರೋಪಿಸಿರುವ ಸಚಿವ ಈಶ್ವರಪ್ಪ, ಕಾಂಗ್ರೆಸ್ ನವರು ನೇರವಾಗಿ ಫೀಲ್ಡಿಗೆ ಬಂದರೆ, ಅವರ ಜೊತೆ ರೈತರು ಬರುವುದಿಲ್ಲ. ಯಾಕಂದ್ರೆ ಕಾಂಗ್ರೆಸ್ ಒಂದು ಅಳಿಸಿ ಹೋಗಿರುವ ನಾಣ್ಯವಾಗಿದೆ. ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ನೋಟು, ನಾಣ್ಯದಂತಾಗಿದೆ. ರೈತರ ಪರವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ವಿಫಲ ಪ್ರಯತ್ನ ನಡೆಸುತ್ತಿದೆ ಅಂತಾ ಟೀಕಿಸಿದ್ದಾರೆ. ನಿನ್ನೆಯ ಶಿವಮೊಗ್ಗ ಮಹಾಪಂಚಾಯತ್ ಗೆ ಕಡಿಮೆ ಜನ ಸೇರಿದ್ದೆ ವಿಫಲವಾಗಿರುವುದು ಎತ್ತಿ ತೋರಿಸುತ್ತಿದೆ.  ಕಾಂಗ್ರೆಸ್ ನವರು ಯಾವ ವೇದಿಕೆ ಮೂಲಕ ನಾವು ಚಟುವಟಿಕೆಯಲ್ಲಿ ಇರಬೇಕೆಂದು ವಿಲಿವಿಲಿ ಒದ್ದಾಡುತ್ತಿದ್ದಾರೆ. ಕಾಂಗ್ರೆಸ್ ನವರಿಗೆ ಯಾವುದೇ ವೇದಿಕೆ ಸಿಗುತ್ತಿಲ್ಲ.  ಈ ಮೂಲಕ ಕಾಂಗ್ರೆಸ್ ವಿಸರ್ಜಿಸಬೇಕೆಂದು ಹೇಳಿದ್ದ ಮಹಾತ್ಮ ಗಾಂಧಿಯವರ ಮಾತು ಈಗ ನಿಜವಾಗುತ್ತಿದೆ ಅಂತಾ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

 

Exit mobile version