Site icon PowerTV

ಸಾರ್ವಜನಿಕ ಸಭೆ ಸಮಾರಂಭಗಳಿಗೆ ಯಾವುದೇ ನಿರ್ಬಂಧ ಇಲ್ಲ: ಬಿ.ಎಸ್.ವೈ  

ಬೆಂಗಳೂರು: ಸರ್ವಜನಿಕ ಸಭೆಸಮಾರಂಭಗಳಿಗೆ ಯಾವುದೇ ನಿರ್ಭಂದ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತುಮಕೂರಿನಲ್ಲಿ ಹೇಳಿದ್ದಾರೆ.

ನಾಲ್ಕು ಗೋಡೆ ಮಧ್ಯೆ ನಡೆಯೋ ಕಾರ್ಯಕ್ರಮಗಳಿಗೆ ಷರತ್ತು ಹಾಕಿದ್ದೇವೆ. ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಂಡು ಕಾರ್ಯಕ್ರಮ ಮಾಡಬಹುದು.  ಸದ್ಯಕ್ಕೆ ರಾಜ್ಯದಲ್ಲಿ ಶಾಲಾ- ಕಾಲೇಜು ಬಂದ್ ಮಾಡುವ ಯೋಚನೆ ಇಲ್ಲವೇ ಇಲ್ಲ. ಇನ್ನು ಒಂದು ವಾರ ಕಾದು ನೋಡುತ್ತೇವೆ, ಪರಿಸ್ಥಿತಿ ಸುಧಾರಿಸದಿದ್ದರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಕೊವಿಡ್ ಕೇಸ್​ ಹೆಚ್ಚಾದರೆ ಪರಿಸ್ಥಿತಿ ನೋಡಿ ಮುಂದಿನ ತೀರ್ಮಾನ ಮಾಡುತ್ತೇವೆ.

ಕೊರೋನಾ‌ ಹಣ ದುರುಪಯೋಗ ಅನ್ನೋ ಸಿದ್ದರಾಮಯ್ಯ ಆರೋಪ ಬರೀ ಸುಳ್ಳು. ವಿಧಾನಮಂಡಲದಲ್ಲಿ ಕೊವಿಡ್ ನಿರ್ವಹಣೆಯ ಖರ್ಚು ವೆಚ್ಚದ ಪೂರ್ಣ ವಿವರ ಕೊಟ್ಟಿದ್ದೇವೆ. ಸಾಕ್ಷ್ಯಾಧಾರ ಇಲ್ಲದೆ ಆರೋಪ ಮಾಡೋದು ವಿರೋಧ ಪಕ್ಷದ ನಾಯಕರಿಗೆ ಶೋಭೆಯಲ್ಲ  ಎಂದು ತುಮಕೂರಿನ ತಿಪಟೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ  ಹೇಳಿದ್ದಾರೆ.

 

 

Exit mobile version