Site icon PowerTV

ಸಚಿವರಿಂದಲ್ಲೇ ಕೊವಿಡ್ ನಿಯಮ ಉಲ್ಲಂಘನೆ..!

ಹುಬ್ಬಳ್ಳಿ : ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ರಾಜ್ಯ ಸರ್ಕಾರ ಕೊರೊನಾ ಕಟ್ಟಿಹಾಕಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ. ಆದ್ರೆ ನಿಯಮಗಳನ್ನು ಜಾರಿ‌ ಮಾಡುವ ಹಾಗೂ ಅದನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡುವಂತೆ ಸೂಚನೆ ನೀಡುವವರೇ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಘಟನೆ ಛಬ್ಬಿ ಗ್ರಾಮದಲ್ಲಿ ನಡೆದಿದೆ.

ಹೌದು. ಧಾರವಾಡ ಜಿಲ್ಲಾಡಳಿತ ಭಾರಿ ಕಠಿಣವಾದ ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿದೆ.  ಖುದ್ದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರೇ ಮಾಸ್ಕ್ ಹಾಕದವರಿಗೆ ದಂಡ ವಿಧಿಸುತ್ತಿದ್ದಾರೆ. ಆದ್ರೆ

ಹುಬ್ಬಳ್ಳಿಯ ಛಬ್ಬಿ ಗ್ರಾಮದಲ್ಲಿ ಕಂದಾಯ ಸಚಿವ ಆರ್ ಅಶೋಕ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಕಂದಾಯ ಸಚಿವ ಆರ್  ಅಶೋಕ ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಪಾಡದೇ ಕೊವಿಡ್ ನಿಯಮ ಉಲ್ಲಂಘನೆ ಮಾಡಿದ್ದು ಕಂಡು ಬಂತು.

ಗ್ರಾಮದಲ್ಲಿ ಮೆರವಣಿಗೆ ಮೂಲಕ ಆಗಮಿಸಿದ ಆರ್ ಅಶೋಕಗೆ ಸ್ವಾಗತಕೋರಲು ನೂರಾರು ಮಹಿಳೆಯರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು. ಅವರಲ್ಲಿ ಶೇ. 90 ರಷ್ಟು ಮಾಸ್ಕ್ ಧರಿಸಿರಲಿಲ್ಲ.  ಸ್ವತ ಜಿಲ್ಲಾಡಳಿತ ಹಾಗೂ ಮಂತ್ರಿಗಳೆ ಕೋವಿಡ್ ನಿಯಮ ಮರೆತಿರುವದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Exit mobile version