Site icon PowerTV

ಕಾಂಗ್ರೆಸ್‌ ವಿರುದ್ಧ ಸಿಎಂ ಬಿಎಸ್‌ ಯಡಿಯೂರಪ್ಪ ವಾಗ್ದಾಳಿ..!

ಬೆಂಗಳೂರು: ಒನ್ ನೇಷನ್ , ಒನ್ ಎಲೆಕ್ಷನ್ ಚರ್ಚೆಗೆ  ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ ಹಿನ್ನಲೆ, ಸಿಎಂ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಪಕ್ಷ ನಾಯಕರು ಆರ್ ಎಸ್ಎಸ್ ಎಂದು ಬೊಬ್ಬೆ ಹೊಡಿಯುತ್ತಿದ್ದಾರೆ.  ಆರ್ ಎಸ್ ಎಸ್ ಹೋರಾಟದಿಂದ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರು ಆರ್ ಎಸ್ ಎಸ್ ವನವರು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಸುಗಮ ಕಲಾಪಕ್ಕೆ ಸಹಕಾರ ಕೊಡಿ, ಭದ್ರಾವತಿ ವಿಚಾರವನ್ನು ಚರ್ಚೆ ಮಾಡೋಣ. ಚರ್ಚೆಯಲ್ಲಿ ಭಾಗವಹಿಸದೆ ಸ್ಪೀಕರ್ ಅವರನ್ನು ಮಾತನಾಡಲು ಬಿಟ್ಟಿಲ್ಲ. ಪ್ರಧಾನಿ ಗಡ್ಡ ಬಿಟ್ಟಿದ್ದಾರೆ ಎಂದು ಟೀಕೆ ಮಾಡುತ್ತಾರೆ. ಪ್ರತಿಪಕ್ಷಗಳು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಸಿಎಂ ಬಿಎಸ್ ಯಡಿಯೂಪ್ಪ ವಾಗ್ದಾಳಿ ನಡೆಸಿದ್ದಾರೆ.

Exit mobile version