Site icon PowerTV

CD ವಿಚಾರದಲ್ಲಿ 5 ಕೋಟಿ ವ್ಯವಹಾರ ನಡೆದಿದೆ: ಹೆಚ್.ಡಿ.ಕೆ

ಬೆಂಗಳೂರು: ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಇದು 200% ಬ್ಲಾಕ್ ಮೇಲೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿದ್ದಾರೆ.

ಸಿಡಿ ವಿಚಾರದಲ್ಲಿ 5 ಕೋಟಿ ವ್ಯವಹಾರ ನಡೆದಿದೆ ಎಂದು ಮೈಸೂರಿನಲ್ಲಿ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ನನ್ನ ಬಳಿ ಸಿಡಿ ಇದೇ ಅನ್ನೋರನ್ನ ಸರ್ಕಾರ ಬಂಧಿಸಬೇಕು. ಇದರ ಹಿಂದೆ ದೊಡ್ಡ ಗ್ಯಾಂಗೇ ಇದೆ. ಸಿಡಿ ಇದೆ ಎನ್ನುವವರೇ ಇದನ್ನು ಮಾಡುತ್ತಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.  

ಇವರ ಹಿಂದೆ ಬೇರೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು. ಬ್ಲ್ಯಾಕ್ ಮೇಲ್ ಮಾಡೋರನ್ನ ಬಂಧಿಸಿ ಏರೋಪ್ಲೇನ್ ಹತ್ತಿಸಬೇಕು ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

Exit mobile version