Site icon PowerTV

‘ಜಾರಕಿಹೊಳಿ ಸಾಹುಕಾರ್’ ರಾಸಲೀಲೆ ಸಿಡಿ ಪ್ರಕರಣ; ದಿನೇಶ್ ಕಲ್ಲಹಳ್ಳಿ ವಿರುದ್ಧ ಡಿಜಿಗೆ ದೂರು

ಮಂಡ್ಯ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿದ ಆರ್.ಟಿ.ಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ದ ತನಿಖೆ ನಡೆಸುವಂತೆ ಡಿಜಿಪಿ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ.

ರಾಜ್ಯದ ಪ್ರಮುಖ ರಾಜಕಾರಣಿಗಳು  ಮತ್ತು ಅಧಿಕಾರಿಗಳ ಅನೇಕ ಸಿಡಿಗಳನ್ನು ಇಟ್ಟುಕೊಂಡು ದಿನೇಶ್ ಕಲ್ಲಹಳ್ಳಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು. ಭಾರತ ಸಂವಿಧಾನ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪೂರ್ಣಚಂದ್ರ ಎಂಬುವವರು ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರು ನೀಡಿದ್ದಾರೆ.

ಹಾಗೆಯೇ ಸಚಿವರ ರಾಸಲೀಲೆ ಸಿಡಿ ಬಿಡುಗಡೆ ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದು, ತಕ್ಷಣವೇ ದೂರು ನೀಡಿರುವ ದಿನೇಶ್ ಕಲ್ಲಹಳ್ಳಿ ಅವರನ್ನು ಬಂಧಿಸಿ ತನಿಖೆ ನಡೆಸುವಂತೆ. ಈತನ ಬಳಿ ಸಿಡಿಗಳು ಎಷ್ಟಿವೆ? ಇದರ ಹಿಂದೆ ಇರುವ ಪ್ರಭಾವಿಗಳು ಯಾರು? ಎನ್ನುವುದನ್ನ ಬಹಿರಂಗ ಪಡಿಸಬೇಕು ಎಂದು ಮನವಿ ಮಾಡಿ ಡಿಜಿ ಹಾಗೂ ಮಾನವಹಕ್ಕು ಆಯೋಗಕ್ಕೆ ಪೂರ್ಣಚಂದ್ರ ದೂರು ಸಲ್ಲಿಕೆ ಮಾಡಿದ್ದಾರೆ.

Exit mobile version