Site icon PowerTV

‘ಮೈಸೂರಿನಲ್ಲಿ ಬೀದಿಗೆ ಬಂದ ಕಾಂಗ್ರೆಸ್ ಒಳಜಗಳ’

ಮೈಸೂರು: ಮೈಸೂರಿನಲ್ಲಿ ಕಾಂಗ್ರಸ್ ಒಳಜಗಳ ಬೀದಿಗೆ ಬಂದಿದೆ. ತನ್ವೀರ್ ಸೇಠ್ ಬೆಂಬಲಿಗರು ಸಿದ್ದರಾಮಯ್ಯ ವಿರುದ್ಧ ಸಿಟ್ಟಿಗೆದ್ದಿದ್ದಾರೆ.

ಪಾಲಿಕೆ ಮೈತ್ರಿಯಿಂದ ಕಾಂಗ್ರಸ್ ನಲ್ಲಿ ಒಳ ಜಗಳ ಶುರುವಾಗಿದೆ. ಸಿದ್ದರಾಮಯ್ಯ ಮನೆ ಮುಂದೆ ಮೊದಲ ಬಾರಿಗೆ ಧಿಕ್ಕಾರ್ ಕೂಗಿ ಕೈ ನಾಯಕರು ಪ್ರೋಟೆಸ್ಟ್ ಮಾಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ವೀರ್ ಸೇಠ್ ಗೆ ನೋಟಿಸ್ ನೀಡಲು ಒತ್ತಾಯಿಸಿದ್ದರು. ಇದರಿಂದ ತನ್ವೀರ್ ಸೇಠ್ ಬೆಂಬಲಿಗರು ರೊಚ್ಚಿಗೆದ್ದು ಧಿಕ್ಕಾರ ಕೂಗಿದ್ದಾರೆ. ಮೇಯರ್ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಬೆಂಬಲಿಸಿದ್ದರು. ಕಾಂಗ್ರೆಸ್ ಸದಸ್ಯತ್ವವನ್ನು ತನ್ವೀರ್ ಸೇಠ್ ವಹಿಸಿದ್ದರು.

 

Exit mobile version