Site icon PowerTV

ನಮ್ಮ ಸರ್ಕಾರದಲ್ಲಿ ಹಿಟ್ಲರ್ ಆಡಳಿತವಿಲ್ಲ: ಶ್ರೀರಾಮುಲು

ಕಾರವಾರ : ನಮ್ಮ ಸರ್ಕಾರದಲ್ಲಿ ಹಿಟ್ಲರ್ ಆಡಳಿತ ಇಲ್ಲಿಯವರೆಗೂ ಬಂದಿಲ್ಲ. ಮುಂದೆಯೂ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವಿಟ್ ಗೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ “ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್‌ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ ಎಂದು ಟ್ವಿಟ್ ಮಾಡಿದ್ದರು.‌ ಈ ವಿಷಯವಾಗಿ ಕಾರವಾರದಲ್ಲಿ ಮಾದ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ರಾಮಮಂದಿರಕ್ಕೆ ಹಣ ಕೊಡದವರ ಮನೆಯನ್ನು ಗುರುತು ಮಾಡುತ್ತಿದ್ದಾರೆ ಎನ್ನುವುದು ಸುಳ್ಳು. ಕುಮಾರಸ್ವಾಮಿ ರಾಜಕೀಯ ಪ್ರೇರಿತ ಆಧಾರವಿಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ರಾಮಮಂದಿರ ನಿರ್ಮಾಣದಲ್ಲಿ ಎಲ್ಲೂ ರಾಜಕೀಯ ಬೇಡ ಎಂದು ಹೇಳಿದರು.

ಇನ್ನು ನಮ್ಮ ಸರ್ಕಾರದಲ್ಲಿ ಹಿಟ್ಲರ್ ಆಡಳಿತ ಇಲ್ಲಿಯವರೆಗೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ. ಕುಮಾರಸ್ವಾಮಿ ಪಬ್ಲಿಸಿಟಿ ಸಲುವಾಗಿ ಆಧಾರ ರಹಿತ ಹೇಳಿಕೆ ಕೊಟ್ಟಿದ್ದಾರೆ. ಹಣ ಸಂಗ್ರಹ ಯಾರಿಗೂ ಒತ್ತಾಯ ಹಾಕಿಲ್ಲ. ಕುಮಾರಸ್ವಾಮಿ ಮನಸ್ಸಿನಲ್ಲಿಯೂ ರಾಮ ಮಂದಿರ ಆಗಬೇಕೆಂಬ ಭಯಕೆ ಇದೆ. ಅವರ ಪಕ್ಷದ ಶಾಸಕರು ಸೇರಿದಂತೆ ಅಲ್ಪಸಂಖ್ಯಾತರು ಮಂದಿರ ನಿರ್ಮಾಣಕ್ಕೆ ಹಣ ಕೊಟ್ಟಿದ್ದಾರೆ. ಕುಮಾರಸ್ವಾಮಿ ಸಹ ಮುಂದೆ ಹಣ‌ಕೊಡಬಹುದು ಎಂದು ಶ್ರೀರಾಮುಲು ಹೇಳಿದ್ದಾರೆ.

ಉದಯ ಬರ್ಗಿ ಕಾರವಾರ

Exit mobile version