Site icon PowerTV

ಮರಳಿ ಕಾಂಗ್ರೆಸ್ ಸೇರುವ ಪ್ರಶ್ನೇಯೇ ಇಲ್ಲ: ರಮೇಶ್ ಜಾರಕಿಹೊಳಿ

ಬೆಂಗಳೂರು: ನಾನು ಮನಸು ಮಾಡಿದರೆ 24 ಗಂಟೆಯಲ್ಲು ಐವರು ಶಾಸಕರನ್ನು ರಾಜೀನಾಮೆ ಕೊಡಿಸುವೆ ಎಂದು ಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್ ನ ಐವರು ಘಟಾನುಘಟಿ ಶಾಸಕರು ರಾಜೀನಾಮೆ ಕೊಡಲು ರೆಡಿಯಾಗಿದ್ದಾರೆ. ಯಾರು ಏನು ಎಂದು ಸೂಕ್ತ ಸಮಯದಲ್ಲಿ ಹೆಸರು ಸಮೇತ ಬಹಿರಂಗ ಪಡಿಸುವೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಕಾಂಗ್ರೆಸ್ ಬಿಟ್ಟು ಬಂದ ಶಾಸಕರು ಮರಳಿ ಕಾಂಗ್ರೆಸ್ ಸೇರುವ ಪ್ರಶ್ನೇಯೇ ಇಲ್ಲ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಮುಖ ಪಾತ್ರ ವಹಿಸುವೆ ಎಂದು ಬೆಳಗಾವಿಯಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

 

 

Exit mobile version