Site icon PowerTV

ಪಂಚಾಯತ ಸಭೆಯಲ್ಲಿ ಕೊವೀಡ್ ನಿಯಮ ಉಲ್ಲಂಘನೆ..!

ವಿಜಯಪುರ: ವಿಜಯಪುರ ಜಿಲ್ಲಾ ಪಂಚಾಯತಿಯ 18 ನೇ ಸಾಮಾನ್ಯ ಸಭೆ ಇಂದು ನಡೆಯಿತು. ಸಾಮಾನ್ಯ ಸಭೆಯಲ್ಲಿ ಕೋವಿಡ್ ನಿಯಮಗಳು ಮಂಗಮಾಯವಾಗಿದ್ದವು.

ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅದ್ಯಕ್ಷೆ ಶ್ರೀಮತಿ ಸುಜಾತಾ ಕಳ್ಳಿಮನಿ ಉಪಾದ್ಯಕ್ಷ  ಪ್ರಭುಗೌಡ ದೇಸಾಯಿ ಸೇರಿದಂತೆ ಬಹುತೇಹ ಸದಸ್ಯರು ಮಾಸ್ಕ ಹಾಕಿಕೊಳ್ಳದೇ ಭಾಗವಹಿಸಿದ್ದರು. ಇತ್ತ ಸಭೆಯಲ್ಲಿ‌ ಭಾಗವಹಿಸಿದ ಸದಸ್ಯರು ಕೂಡಾ ಮಾಸ್ಕ್ ಹಾಕಿಕೊಳ್ಳದೇ ಭಾಗವಹಿಸಿದ್ದರು. ಇನ್ನೂ ಸಾರ್ವಜನಿಕರಿಗೆ ಕೋವಿಡ್ ಜಾಗೃತಿ ಮೂಡಿಸಬೇಕಾದವರೇ ಮಾಸ್ಕ ಇಲ್ಲದೇ ಸಭೆಯಲ್ಲಿ ಭಾಗಿಯಾಗಿದ್ದರ ಕುರಿತು ಪ್ರಜ್ಞಾವಂತರು ಆಕ್ರೋಶ ಹೊರಹಾಕುತ್ತಿದ್ದಾರೆ.

Exit mobile version