Site icon PowerTV

ಸಿಎಂ ಉದ್ಧವ್ ಠಾಕ್ರೆಗೆ ಮರಾಠಿಗರಿಂದಲೇ ಪ್ರತ್ಯುತ್ತರ..!

ಬೆಂಗಳೂರು: ಕರ್ನಾಟಕದ ಜೊತೆ ಗಡಿ ಕ್ಯಾತೆ ತೆಗೆಯೋದೇ ನಿಮ್ಮ ಅಜೆಂಡನಾ? ಗಡಿಗಿಂತ ರಾಜ್ಯದ ಮಹತ್ವದ ವಿಚಾರಗಳ ಬಗ್ಗೆ ಗಮನ ಹರಿಸಿ ಎಂದು ಸಿಎಂ ಉದ್ಧವ್ ಠಾಕ್ರೆಗೆ ಮರಾಠಿಗರು ಸಾಮಾಜಿಕ ಜಾಲತಾಣದಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.  

ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಿ. ಜನರಿಗೆ ಮೂಲ ಸೌಕರ್ಯ ಒದಗಿಸಿ. ಯುವಕರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಿ. ಅಭಿವೃದ್ಧಿ ಕೆಲಸ ಬಿಟ್ಟು ಬೇರೆ ಕೆಲಸ ಮಾಡೋದು ಬಿಡಿ. ಪದೇ ಪದೇ ಗಡಿ ವಿಚಾರ ಕೆದಕುತ್ತಿದ್ದ ಉದ್ಧವ್ ಠಾಕ್ರೆಗೆ ತೀರುಗೇಟು ನೀಡಿದ್ದಾರೆ. ನಮ್ಮಲೇ ಸಾಕಷ್ಟು ಜ್ವಲಂತ ಸಮಸ್ಯೆಗಳು ಇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಹಾರಾಷ್ಟರ ಸಿಎಂ ಉದ್ಧವ್ ಠಾಕ್ರೆಗೆ ಮರಾಠಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.  

Exit mobile version