Site icon PowerTV

ಯುಗಾದಿ ಹಬ್ಬದ ವೇಳೆಗೆ ರಾಜ್ಯಕ್ಕೆ ಹೊಸ ಸಿಎಂ: ಬಸನಗೌಡ ಪಾಟೀಲ್

ವಿಜಯಪುರ: ಯುಗಾದಿ ಹಬ್ಬದ ವೇಳೆಗೆ ರಾಜ್ಯದಲ್ಲಿ ಹೊಸ ಸಿಎಂ ಆಡಳಿದ ರಾಜ್ಯದಲ್ಲಿ ಇರುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಹೊಸ ವರ್ಷಕ್ಕೆ ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಬರಲಿದ್ದಾರೆ. ಈ ಹಿಂದೆ ಮೂರು ತಿಂಗಳಲ್ಲಿ ನಾಯಕತ್ವ ಬದಲಾಗುತ್ತೆ ಅಂತ ಹೇಳಿದ್ದೆ. ನೋಡ್ತಾ ಇರಿ ಯುಗಾದಿ ವೇಳೆಗೆ ಬಿಜೆಪಿ ನಾಯಕತ್ವ ಬದಲಾಗಲಿದೆ. ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

ನಮಗೆ ಮಂತ್ರಿಗಿರಿ ನೀಡಿ ಅಂತ ದಾವಣಗೆರೆಗೆ ಹೋಗಿಲ್ಲ. ಮಂತ್ರಿಸ್ಥಾನ ಕೊಡುವ ಜಾಗಕ್ಕೆ ನಮ್ಮವರು ಒಬ್ಬರು ಬರುತ್ತಾರೆ ಎಂದು ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

Exit mobile version