Site icon PowerTV

ದೇಶದ ಅನ್ನದಾತರಿಗೆ ಅನ್ಯಾಯವಾಗಲು ಬೀಡೋದಿಲ್ಲ: ನರೇಂದ್ರ ಮೋದಿ

ಬೆಂಗಳೂರು: ದೇಶದ ಅನ್ನದಾತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ರೈತರು ಸಾವಧಾನದಿಂದ ಮಾತುಕತೆಯಲ್ಲಿ ಭಾಗಿಯಾಗಬೇಕು ಸರ್ವ ಪಕ್ಷ ಸಭೆಯಲ್ಲಿ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಕೃಷಿ ಕಾಯ್ದೆ ವಿಚಾರದಲ್ಲಿ ಆತಂಕಗೊಳ್ಳುವುದು ಬೇಡವೇ ಬೇಡ. ರೈತರ ಎಲ್ಲಾ ಬೇಡಿಕೆಗಳ ಬಗ್ಗೆ ಸರ್ಕಾರ ಸಹನಾಭೂತಿ ಹೊಂದಿದೆ. ರೈತರು ಕೇಳಿರುವ ಎಲ್ಲ ವಿಚಾರಗಳನ್ನು ಸರ್ಕಾರ ಪರಿಶೀಲಿಸುತ್ತಿದೆ. ವಿಪಕ್ಷಗಳು ಸಹ ಕೃಷಿ ಕಾಯ್ದೆ ವಿಚಾರದಲ್ಲಿ ಸಂಯಮದಿಂದ ಇರಬೇಕು. ಕೃಷಿ ಸಚಿವರು ಕಾಯ್ದೆ ವಿಚಾರದಲ್ಲಿ ಈಗಾಗಲೇ ಕೆಲವು ಪ್ರಸ್ತಾಪ ನೀಡಿದ್ದಾರೆ. ಸಚಿವರು ನೀಡಿರುವ ಪ್ರಸ್ತಾಪಗಳು ಚಾಲ್ತಿಯಲ್ಲಿವೆ ಎಂದರು. ಬಜೆಟ್ ಅಧಿವೇಶ ಹಿನ್ನಲೆಯಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ಅಧಿವೇಶನ ಸುಸೂತ್ರವಾಗಿ ನಡೆಯಲು ಸಹಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

 

 

Exit mobile version