Site icon PowerTV

ಇನ್ನೂ ನಿಂತಿಲ್ಲ ಸಿಎಂಗೆ ಖಾತೆ ಹಂಚಿಕೆ ಟೆನ್ಷನ್‌!

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಇನ್ನೂ ಖಾತೆ ಹಂಚಿಕೆ ಟೆನ್ಷನ್ ಕಡಿಮೆಯಾಗಿಲ್ಲ. ಮೂರ್ನಾಲ್ಕು ಬಾರಿ ಖಾತೆ ಬದಲಾವಣೆ ಮಾಡಿದಕ್ಕೆ ಆನಂದ್ ಸಿಂಗ್ ಬೇಸರ ವ್ಯಕ್ತ ಪಡಿಸಿದ್ದಾರೆ.

ನಿನ್ನೆ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಲು ಸಚಿವ ಆನಂದ್ ಸಿಂಗ್ ಹೋಗಿದ್ದರು. ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿಯಾಗದ ಹಿನ್ನಲೆಯಲ್ಲಿ ಇಂದು ಮತ್ತೆ ನೇರವಾಗಿ ದೂರು ಸಲ್ಲಿಸಲ್ಲಿದ್ದಾರೆ. ಮೊದಲು ಇದ್ದ ಅರಣ್ಯ ಖಾತೆ ತೆಗೆದು ಪ್ರವಾಸೋಧ್ಯಮ ಖಾತೆ ನೀಡಲಾಗಿತ್ತು. ಮತ್ತೆ ಬದಲಾವಣೆ ಮಾಡಿ ಮೂಲ ಸೌಕರ್ಯ ಅಭಿವೃದ್ಧಿ ಖಾತೆ ಹಾಗೂ ಹಜ್-ವಕ್ಪ್ ಖಾತೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ನೀಡಿದ್ದಾರೆ. ಹಜ್- ವಕ್ಪ್ ಖಾತೆ ನೀಡಿದಕ್ಕೆ ಆನಂದ್ ಸಿಂಗ್ ಕೆಂಡಾಮಂಡಲವಾಗಿದ್ದಾರೆ. ಖಾತೆ ಬದಲಾವಣೆಯಿಂದ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿ, ನನಗೆ ಸಚಿವ ಸ್ಥಾನ ಬೇಡ, ನಾನು ಶಾಸಕನಾಗಿ ಮುಂದುವರೆಯುತ್ತೇನೆ ಎಂದು ಹೇಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Exit mobile version