Site icon PowerTV

ಉದ್ಧವ್ ಠಾಕ್ರೆ ಹೇಳಿಕೆಗೆ ಸಿಲಿಕಾನ್ ಸಿಟಿ ಮರಾಠಿಗರಿಂದ ವಿರೋಧ

ಬೆಂಗಳೂರು : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ದಿನ ದಿನಕ್ಕೆ ಪ್ರತಿಭಟನೆಗಳು ಜಾಸ್ತಿಯಾಗುತ್ತಿವೆ. ಇವತ್ತು ನಗರದ ಮೌರ್ಯ ಸರ್ಕಲ್​ನಲ್ಲಿ ಸಿಲಿಕಾನ್ ಸಿಟಿಯ ಮರಾಠಿಗರೆಲ್ಲಾ ಒಂದೆಡೆ ಸೇರಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ರು. ಸಕಲ ಮರಾಠ ಸಮಾಜದಿಂದ ಉದ್ದವ್ ಠಾಕ್ರೆಗೆ ಧಿಕ್ಕಾರ ಕೂಗಿದ್ರು. ಉದ್ದವ್ ಠಾಕ್ರೆ ಅವರು ಕನ್ನಡಿಗ ಮರಾಠರನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಬೆಳಗಾವಿ,ಕಾರವಾರ ಹಾಗೂ ನಿಪ್ಪಾಣಿ ಎಂದೆಂದಿಗೂ ಕನ್ನಡಿಗರ ಸೊತ್ತು,ನಾಡದ್ರೋಹಿ ಎಂಇಎಸ್ ನಿಷೇಧಿಸಬೇಕು.ಕರ್ನಾಟಕದ ವಿರುದ್ದ ಮಹಾರಾಷ್ಟ್ರಮುಖ್ಯಮಂತ್ರಿ ಯಾವುದೇ ಹೇಳಿಕೆ ನೀಡಬಾರದು. ಮರಾಠ ಕನ್ನಡಿಗರಲ್ಲಿ ವಿಷ ಬೀಜ ಬಿತ್ತ ಬಾರದು ಅಂತ ಆಗಹಿಸಿದ್ರು.

Exit mobile version