Site icon PowerTV

‘ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿ ಬೇಸರ’

ಚಿತ್ರದುರ್ಗ: ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಹಿರಿಯ ಶಾಸಕ ತಿಪ್ಪಾರೆಡ್ಡಿ ಚಿತ್ರದುರ್ಗದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಾರಿಯಾದರೂ ಸಚಿವ ಸ್ಥಾನಕ್ಕೆ ಅವಕಾಶ ಸಿಗುತ್ತೆ ಅಂತ ಮಾಡಿದ್ದೆ. ಹಿರಿಯರ ಪಟ್ಟಿಯಲ್ಲಿ ಅಂಗಾರ ಮತ್ತು ಉಮೇಶ್ ಕತ್ತಿಗೆ ಸಿಕ್ಕಿದೆ. ನಾನು ರಾಜಕೀಯಕ್ಕಾಗಿ ಸುಮ್ಮನೆ ಒಂದು ಜನರೇಷನ್ ವೇಸ್ಟ್ ಮಾಡಿದ್ದೇನೆ.  ಇನ್ನೂ ನೂರು ವರ್ಷ ಬದುಕಿರುತ್ತೇವೆ ಎಂದರೆ ಎನೋ ಮಾಡಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿದ್ದು, ತುಂಬಾ ಆಶ್ಛರ್ಯ ತಂದಿದೆ. ಸಹಾರ ಮಾಡಿದ್ದಾರಂತೆ. ಏನೂ ಮಾಡಿದ್ದಾರೋ ಗೊತ್ತಿಲ್ಲ. ಆಪರೇಷನ್ ಕಮಲದ ವೇಳೆ ಕಾಲ್ ಮಾಡುತ್ತಿದ್ದರು. ಯಾಕೆ ಅಂತ ಗೊತ್ತಿಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ ಮೂರು ಬಾರಿ ಬಿಜೆಪಿ ಸರ್ಕಾರ ಬಂದರೂ ನನಗೆ ಅವಕಾಶ ಸಿಕ್ಕಿಲ್ಲ. ಚುನಾವಣೆ ವೇಳೆ ಪಕ್ಷಕ್ಕೆ ವಿರೋಧವಾಗಿ ಕೆಲಸ ಮಾಡಿದವರಿಗೆ ಸಂಪುಟದಲ್ಲಿ ಅವಕಾಶ ನೀಡಿರುವುದು ಆಶ್ಚರ್ಯ. ಮೊದಲು ಎಲ್ಲರನ್ನು ಗುರುತಿಸುವ ಕೆಲಸ ಮಾಡಿ ಅವಕಾಶ ನೀಡುತ್ತಿದ್ದರು. ಆದರೆ ಈಗ ಬಿಜೆಪಿಯಲ್ಲಿ ಸಮಾನತೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Exit mobile version